ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಈ ಸಾಲಿನ ಬಜೆಟ್ ಒಂದು ಉತ್ತಮ ಬಜೆಟ್ ಆಗಿದೆ. ಅಷ್ಟೆ ಅಲ್ಲ ಇದು ದೇಶದ ಪ್ರಗತಿಗೆ ಪೂರಕವಾಗಿದೆ. ಜೊತೆಗೆ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈತರಿಗೆ, ಬಡವರಿಗೆ ಮತ್ತು ಹಳ್ಳಿಗಳಿಗೆ ಇಷ್ಟೊಂದು ಆದ್ಯತೆ ನೀಡಿದ ಆಯವ್ಯಯ ಇದಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮತ್ತು ವಿಧಾನಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರವು ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕು ಅವನ ಆದಾಯ ದ್ವಿಗುಣಗೊಳಿಸಲು ಪೂರಕ ಹೆಜ್ಜೆಗಳನ್ನು ಇಡುವ ಮೂಲಕ ರೈತರಿಗೆ ಹೊಸ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡಿದೆ. ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಗ್ರಾಮೀಣ ಜನರ ಬದುಕು ಹಸನಾಗಿಸಲು ಪ್ರಯತ್ನಿಸಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಅವರು ಹೇಳಿದ್ದಾರೆ.
ಜಲಕ್ಷಾಮ ಯೋಜನೆ, ವಿದ್ಯುತ್ ಸ್ವಾಲಂಬನೆ, ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಆದ್ಯತೆ, ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಕಿಸಾನ್ ರೈಲ್, ಕಿಸಾನ್ ಉಡಾನ್ ಯೋಜನೆ, ಆಯುಷ್ಮಾನ್ ಭಾರತದ ಜೊತೆ ಜನರ ಆರೋಗ್ಯದ ಕಡೆ ಗಮನ, ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆದ್ಯತೆ, ಬಡವ ವಾಸವಿರುವಲ್ಲಿಯೆ ಪದವಿ ವಿದ್ಯೆ, ಎಕ್ಸಪೋರ್ಟ ಹಬ್ ಮಾಡಲು ವ್ಯವಸ್ಥೆ, ಬೆಂಗಳೂರಿಗೆ ಅರ್ಬನ್ ರೈಲಿಗೆ ಅನೂಮೋದನೆ, ರಾಷ್ಟ್ರಿಯ ನೇಮಕಾತಿ ಆಯೋಗದಿಂದ ಯುವಕರಿಗೆ ಸುಲಭದಲ್ಲಿ ಕೆಲಸ ಪಡೆಯಲು ಸಹಾಯ, Tax payers Charter ಮೂಲಕ ಆದಾಯ ತೆರಿಗೆದಾರರಿಗೆ ಇರುವ ಅಡಚಣೆಯನ್ನು ತೆಗೆಯುವಲ್ಲಿ ಒಂದು ದೂಡ್ಡ ಹೆಜ್ಜೆ ಇಡಲಾಗಿದೆ. ಒಟ್ಟಾರೆಯಾಗಿ ಸಮತೋಲನದ ಜನಪರ, ಅಭಿವೃದ್ದಿಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ