Kannada NewsKarnataka News
ಆರ್ಥಿಕ ಪ್ರಗತಿದಾಯಕ ಬಜೆಟ್ -ಮಹಾಂತೇಶ ದೊಡಗೌಡರ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಆರ್ಥಿಕ ಪ್ರಗತಿದಾಯಕವಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಪ್ರತಿಕ್ರಿಯಿಸಿದ್ದಾರೆ.
ರೈತರಿಗೆ, ಮಹಿಳೆಯರಿಗೆ ಹಾಗೂ ಜನ ಸಾಮಾನ್ಯರಿಗೆ ಸಹಾಯಕವಾದ ಬಜೆಟ್ ಇದು. ವಿಶೇಷವಾಗಿ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜುಗಳನ್ನು ನೀಡಿರುವುದು ಪ್ರಶಂಸಾರ್ಹವಾಗಿದೆ. ಬ್ಯಾಂಕ್ ಗಳು ದಿವಾಳಿಯಾದರೆ ಮೊದಲು ಒಂದು ಲಕ್ಷ ರೂ. ಮಾತ್ರ ಪರಿಹಾರ ಧನ ನೀಡುತ್ತಿದ್ದರು. ಆ ಮೊತ್ತವನ್ನು ಐದು ಲಕ್ಷಕ್ಕೆ ಏರಿಸಲಾಗಿದೆ. ಒಟ್ಟಿನಲ್ಲಿ ಇದೊಂದು ಆರ್ಥಿಕ ಪ್ರಗತಿದಾಯಕ ಬಜೆಟ್ ಆಗಿದೆ ಎಂದು ಅವರು ಹೇಳಿದ್ದಾರೆ.




