Kannada NewsKarnataka NewsLatest

ಕಣಕುಂಬಿ ತನಿಖಾ ಠಾಣೆಯಲ್ಲಿ 147 ಲೀ ಗೋವಾ ಮದ್ಯ ವಶ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕಣಕುಂಬಿ ಬಳಿಯ ಕರ್ನಾಟಕ -ಗೋವಾ ಗಡಿಯ ಅಬಕಾರಿ ತನಿಖಾ ಠಾಣೆಯ  ಸಿಬ್ಬಂದಿ ಶನಿವಾರ ಗೋವಾದಿಂದ ಗದಗ ನಗರಕ್ಕೆ ಅನಧಿಕೃತವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ತಪಾಸಣೆಯ ವೇಳೆ ಗೋವಾ ರಾಜ್ಯದ ನೊಂದಣಿ ಹೊಂದಿದ ಸ್ಕಾರ್ಪಿಯೋ ವಾಹನದಲ್ಲಿ ೧೪೬.೮೮ ಲೀ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದಿರುವ ಅಬಕಾರಿ ಸಿಬ್ಬಂದಿ ಈ ಮದ್ಯವನ್ನು ಸಾಗಿಸುತ್ತಿದ್ದ ಆರೋಪದಡಿ ಗದಗ ನಿವಾಸಿ ಮಾರುತಿ ಲಮಾಣಿ ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಶಕ್ಕೆ ಪಡೆದ ಗೋವಾ ಮದ್ಯದ ಮೌಲ್ಯ ೧ ಲಕ್ಷ ಮತ್ತು ವಾಹನದ ಅಂದಾಜು ಮೌಲ್ಯ ೫ ಲಕ್ಷ ಎಂದು ಮೂಲಗಳು ತಿಳಿಸಿದ್ದು, ಈ ಕುರಿತು ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button