Belagavi NewsBelgaum NewsKannada NewsKarnataka NewsLatest

ದೂರಾಲೋಚನೆ ಇಲ್ಲದ ಬಜೆಟ್ – ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಮಂಡಿಸಿರುವ ಬಜೆಟ್ ಯಾವುದೇ ದೂರಾಲೋಚನೆ ಹೊಂದಿಲ್ಲ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ನಮ್ಮದು “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಮೂಲಮಂತ್ರವೆಂದು ಹೇಳಿದ್ದಾರೆ. ಅಭಿವೃದ್ಧಿ, ಸಾಮಾಜಿಕ ನ್ಯಾಯದ ಪರ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ.  ಈ ಬಜೆಟ್ ನೋಡಿದರೆ ಎಲ್ಲಿದೆ ಸರ್ವರಿಗೂ ಸಮಪಾಲು, ಎಲ್ಲಿದೆ ಸರ್ವರಿಗೂ ಸಮಬಾಳು? ಈ ಬಜೆಟ್ ರಾಜಕೀಯ ಪ್ರೇರಿತ ಬಜೆಟ್ ಆಗಿದೆ. ಈ ಬಜೆಟ್ ಅಲ್ಪಸಂಖ್ಯಾತರ ಓಲೈಕೆಗಾಗಿಯೇ ಮೀಸಲಿಟ್ಟಂತಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಭಿವೃದ್ಧಿ, ಸಾಮಾಜಿಕ ನ್ಯಾಯ ಯಾವುದೂ ಇಲ್ಲ. ಬಹುಸಂಖ್ಯಾತ ಹಿಂದುಗಳ ಅಭ್ಯುದಯಕ್ಕೆ ಯಾವುದೇ ರೀತಿಯ ಅನುದಾನ ಮತ್ತು ಯೋಜನೆಗಳಿಲ್ಲ. ಇದೊಂದು ಜನವಿರೋಧಿ ಬಜೆಟ್. ಮೊದಲ ವರ್ಷವೇ 85 ಸಾವಿರ ಕೋಟಿ ರೂ ಸಾಲ ತೋರಿಸಿದ್ದಾರೆ ಎಂದು ಸೋನಾಲಿ ಟೀಕಿಸಿದ್ದಾರೆ.

 ಯಾವುದೇ ಮುಂದಾಲೋಚನೆ ಇಲ್ಲದೇ, ರಾಜ್ಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲದೆ ಮಂಡಿಸಿರುವ ಈ ಬಜೆಟ್ ರಾಜ್ಯದ ಪಾಲಿಗೆ ಕರಾಳವಾಗಲಿದೆ. ಇದರ ಜೊತೆಗೆ,

• ಎಪಿಎಂಸಿ ಕಾಯ್ದೆ ರದ್ದು.

• ಭಾಗ್ಯಲಕ್ಷ್ಮೀ ಯೋಜನೆ (ಭಾಗ್ಯಲಕ್ಷ್ಮೀ ಬಾಂಡ್) ರದ್ದು. 

• ಜಿಲ್ಲೆಗೊಂದು ಸ್ಥಾಪಿಸಿದ್ದ ಗೋಶಾಲೆ ಯೋಜನೆ ರದ್ದು

• ನೂತನ ಶಿಕ್ಷಣ ನೀತಿ ರದ್ದು (ಎನ್.ಇ.ಪಿ)

• ಅಗ್ನಿವೀರ ಯೋಜನೆಗೆ ಯುವಕರಿಗೆ ತರಬೇತಿ ಯೋಜನೆ ರದ್ದು

• ಮಕ್ಕಳ ಉಚಿತ ಬಸ್ ಯೋಜನೆ ರದ್ದು

• ಸ್ವಾಮಿ ವಿವೇಕಾನಂದ ಯುವಕ ಸಂಘಗಳ ರದ್ದು

• ವಿವೇಕ ಶಾಲಾ ಕೊಠಡಿಗಳ ಕಟ್ಟಡ ಯೋಜನೆ ರದ್ದು

• ಭೂಸಿರಿ ಯೋಜನೆ ರದ್ದು

• ಅಂತರ್ಜಲ ಹೆಚ್ಚಿಸುವ “ಜಲನಿಧಿ” ಯೋಜನೆ ರದ್ದು ಇವೆಲ್ಲ ಅತ್ಯಂತ ಜನ ವಿರೋಧಿ ನೀತಿಯಾಗಿದೆ.

ಇದೊಂದು ಲೋಕಸಭಾ ಚುನಾವಣೆಯ ಹಿನ್ನೆಲೆಯ ಬಜೆಟ್ ಆಗಿದೆ. ಕಾಂಗ್ರೇಸ್ ಸರ್ಕಾರಕ್ಕೆ ಯಾವುದೇ ಅಭಿವೃದ್ಧಿ ಚಿಂತನೆಗಳಿಲ್ಲ ಎನ್ನುವುದು ಈ ಬಜೆಟ್‌ನಲ್ಲಿ ಸಾಭೀತಾಗಿದೆ ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button