ವಿದ್ಯಾರ್ಥಿಗಳಿರುವಾಗಲೇ ಉಜ್ವಲ ಭವಿಷ್ಯದ ಮೆಟ್ಟಿಲು ನಿರ್ಮಿಸಿಕೊಳ್ಳಿ – ಲಕ್ಷ್ಮೀ ಹೆಬ್ಬಾಳಕರ್ ಕರೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿಸದೆ ಉಜ್ವಲ ಭವಿಷ್ಯದ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಕೆ ಎಚ್ ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಫೌಂಡೇಷನ್ ವತಿಯಿಂದ ಶನಿವಾರ, ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ನಮಗೆ ಹಲವಾರು ಕನಸುಗಳಿರುತ್ತವೆ. ಈ ಸಂದರ್ಭದಲ್ಲಿ ನಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಮುನ್ನಡೆದರೆ ಮುಂದಿನ ಜೀವನ ಸುಲಭವಾಗುತ್ತದೆ. ಜ್ಞಾನ ಎಲ್ಲಿಂದಲೇ ಬಂದರೂ ಅದನ್ನು ಸ್ವೀಕರಿಸಬೇಕು. ಕೇವಲ ಪರೀಕ್ಷೆಗಾಗಿ ಓದದೆ ಜ್ಞಾನ ಹೆಚ್ಚಿಸಿಕೊಳ್ಳಲು ಗಮನ ಕೊಡಿ ಎಂದು ಹೆಬ್ಬಾಳಕರ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹೇಶ ಪಾಟೀಲ, ಗ್ರಾಮ ಪಂಚಾಯತ್ ಸದಸ್ಯೆ ರಂಜನಾ ಬಾ ಗಿರಿಯಾಲ್ಕರ್, ಶಿವಬಸ್ಸು ಚಚಡಿ, ಮಾರುತಿ ಕೊನಸಿನಕೊಪ್ಪ, ಬಾಳು ಗಿರಿಯಾಲ್ಕರ್, ಜ್ಯೋತಿಬಾ ಶಿ ಪಾಟೀಲ, ಬಸವಂತ ಪಾಟೀಲ, ಮಾರುತಿ ಪಾಟೀಲ, ಮಹೇಶ್ ಪಾಟೀಲ, ಸುಭಾಷ್ ಪಾಟೀಲ, ಶಂಕರ ಪಾಟೀಲ, ಪ್ರಕಾಶ ಪಾಟೀಲ, ಪಿಂಟು ಪಾಟೀಲ, ಬಸವರಾಜ ಶಿಂಧೆ, ಯಲ್ಲಪ್ಪ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ