*ತಂತ್ರಜ್ಞಾನಗಳ ಬಳಕೆಯಿಂದ ದೀರ್ಘಕಾಲ ಬಾಳಿಕೆಯ ರಸ್ತೆಗಳನ್ನು ನಿರ್ಮಿಸಿ: ಎಸ್ ಎಫ್ ಪಾಟೀಲ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆಗಳು ದೇಶದ ಸಮೃದ್ಧಿಯನ್ನು ತೋರ್ಪಡಿಸುತ್ತವೆ. ಆದ್ದರಿಂದ ರಸ್ತೆಗಳ ಅಭಿವೃದ್ಧಿ ಬಹುಮುಖ್ಯವಾಗಿದೆ. ಆಧುನೀಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ದೀರ್ಘಕಾಲ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸುವ ಮೂಲಕ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಕೆ.ಎಸ್.ಎಚ್.ಐ.ಪಿ ಚೀಫ್ ಪ್ರೋಜೆಕ್ಟ್ ಆಫೀಸರ್ ಎಸ್ ಎಫ್ ಪಾಟೀಲ ಅಭಿಪ್ರಾಯಪಟ್ಟರು.
ಸೋಮವಾರದಂದು ಬೆಳಗಾವಿಯ ದಿ ಇನ್ಸಟಿಟ್ಯೂಶನ್ ಆಫ್ ಇಂಜೀನಿಯರ್ಸ್ ಬೆಳಗಾವಿಯ ಸಹಯೋದಲ್ಲಿ ರಸ್ತೆ ಸುರಕ್ಷತೆ ಇಂಜಿನೀಯರಿಂಗ್ ಮತ್ತು ಇನ್ನೋವೇಟ್ಹಿವ್ ಕನ್ಟ್ರಕ್ಷನ್ ಟೆಕ್ನಾಲಜಿಯ ಕುರಿತು ಎರಡು ದಿನ ಕಾರ್ಯಾಗಾರವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಆಯೋಜಿಸಲಾಗಿತ್ತು.
ಇನ್ಸಟಿಟ್ಯೂಶನ್ ಆಫ್ ಇಂಜೀನಿಯರ್ಸನ ಎಸ್.ವೈ. ಕುಂದರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೆ.ಎಸ್.ಎಚ್.ಐ.ಪಿ ಚೀಫ್ ಪ್ರೋಜೆಕ್ಟ್ ಆಫೀಸರ್ ಎಸ್ ಎಫ್ ಪಾಟೀಲ, ಪಿ.ಡಬ್ಲ್ಯೂ.ಡಿ. ಧಾರವಾಡ ಮುಖ್ಯ ಇಂಜೀನಿಯರ್ ಎಚ್. ಸುರೇಶ್ ಉಪಸ್ಥಿತರಿದ್ಧರು. ವಿಶೇಷ ಆಹ್ವಾನಿತರಾಗಿ ಇನ್ಸಟಿಟ್ಯೂಶನ್ ಆಫ್ ಇಂಜೀನಿಯರ್ಸನ ಚೇರಮನ್ ಎಂ ನಾಗರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಅಭಿಯಂತರರಾದ ಮನ್ಮಂಥಯ್ಯಾಸ್ವಾಮಿ ಉಪಸ್ಥಿತರಿದ್ಧರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೆ.ಎಸ್.ಎಚ್.ಐ.ಪಿ ಚೀಫ್ ಪ್ರೋಜೆಕ್ಟ್ ಆಫೀಸರ್ ಎಸ್ ಎಫ್ ಪಾಟೀಲ ಈ ವೇಳೆ ರಸ್ತೆಗಳು ದೇಶದ ಸಮೃದ್ಧಿಯ ತೋರ್ಪಡಿಸುತ್ತವೆ. ಆದ್ದರಿಂದ ರಸ್ತೆಗಳ ಅಭಿವೃದ್ಧಿ ಬಹುಮುಖ್ಯವಾಗಿದೆ. ಆಧುನೀಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ದೀರ್ಘಕಾಲ ಬಾಳಿಕೆ ಬರುವ ರಸ್ತೆಗಳನ್ನು ನಿರ್ಮಿಸಬೇಕು. ಇದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ಅಲ್ಲದೇ ವಿದ್ಯಾರ್ಥಿ ವರ್ಗದಿಂದಲೇ ಪಾಠ್ಯಪುಸ್ತಕಗಳಲ್ಲಿ ರಸ್ತೆ ಸುರಕ್ಷೆಯ ಜಾಗೃತಿಯನ್ನು ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯದರ್ಶಿಗಳಾದ ಡಾ.ಬಿ.ವೆಂಕಟೇಶ, ಸಂಯೋಜಕರಾದ ಸಿ.ಬಿ.ಹಿರೇಮಠ ಸೇರಿದಂತೆ ದಿ ಇನ್ಸಟಿಟ್ಯೂಶನ್ ಆಫ್ ಇಂಜೀನಿಯರ್ಸನ ಸದಸ್ಯರು ಭಾಗಿಯಾಗಿದ್ಧರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ