Kannada NewsKarnataka NewsLatest

ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳು ಭಸ್ಮ

ಪ್ರಗತಿ ವಾಹಿನಿ ಸುದ್ದಿ, ಹುಕ್ಕೇರಿ; ಪಟ್ಟಣದ ಪುರಸಭೆ ಹತ್ತಿರದ ಇಲೆಕ್ಟ್ರೀಕ್ ಹಾಗೂ ಪುಟವೇರ್   ಅಂಗಡಿಗಳಿಗೆ ಆಕಸ್ಮಿಕ ವಿದ್ಯುತ್ ಶಾರ್ಟಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ೧೦ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.
ಸದಾನಂದ ಮಗದುಮ್ಮ ಹಾಗೂ ಭವರಾಜ ಕಾಂಬಳೆ ಎಂಬುವವರಿಗೆ ಸೇರಿದ ಅಂಗಡಿಗಳಿಗೆ ಏಕಾಏಕಿಬೆಂಕಿ ಹತ್ತಿದ ಪರಿಣಾಮವಾಗಿ ಈ ಅವಘಡ ಸಂಭಿಸಿದೆ, ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಸಿದರೂ ಕೂಡ ವಿಫವಾಗಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.

ಮಧ್ಯಪಾನಮಾಡಿ ನಿದ್ರೆಗೆ ಜಾರಿದ್ದ ಅಗ್ನಿಶಾಮಕ ಅಧಿಕಾರಿಗಳು?  

ಪಟ್ಟಣದ ಹೊರವಲಯದಲ್ಲಿರುವ ಅಗ್ನಿಶಾಮಕ ಅಧಿಕಾರಿಗಳಿಗೆ ಸಾರ್ವಜನಿಕರು ಅಂಗಡಿಗಳಿಗೆ ಬೆಂಕಿ ಹೊತ್ತಿರುವ ವಿಷಯ ದೂರವಾಣಿ ಮೂಲಕ ತಿಳಿಸಿದರೂ ಕೂಡ ಬೆಂಕಿ ಹೊತ್ತಿ ೧ ಗಂಟೆಯಾದರೂ ಆಗಮಿಸಲಿಲ್ಲ, ಇದರಿಂದ ಜನರು ಕುಪಿತಗೊಂಡು ಅಗ್ನಿಶಾಮಕ ಕಚೇರಿಗೆ ತೆರಳಿದಾಗ ಅಗ್ನಿಶಾಮಕ ಅಧಿಕಾರಿಗಳು ಮಧ್ಯಪಾನಮಾಡಿ ನಿದ್ರೆಗೆ ಜಾರಿದ್ದರು.

ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ಪಟ್ಟಣದಲ್ಲಿ ಅಂಗಡಿಗಳಿಗೆ ಬೆಂಕಿಹತ್ತಿ ಉರಿಯುತ್ತಿವೆ. ಆದರೆ ನೀವು ಇಲ್ಲಿ ಮಲಗಿಕೊಂಡಿದ್ದಿರೆಂದು ಎಂದು ಆಕ್ರೋಶ ವ್ಯಕ್ತಪಡಿದಾಗ ಅಗ್ನಿಶಾಮಕ ವಾಹನದ ಜೊತೆ ಪಟ್ಟಣಕ್ಕೆ ಬೆಂಕಿ ಆರಿಸಲು ಆಗಮಿಸಿದರು ಕೂಡ ಯಾವುದೇ ಪ್ರಯೋಜವಾಗದೆ ಅಂಗಡಿಗಳು ಸಂಪೂರ್ಣ ಭಸ್ಮವಾಗಿದ್ದವು.

ನೀವು ಸರಿಯಾದ ಸಮಯಕ್ಕೆ ಬಂದಿದ್ದರೆ ಬೆಂಕಿಯ ಅವಘಡದಿಂದ ತಪ್ಪಿಸಬಹುದಾಗಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿ ಗಲಾಟೆಮಾಡಲು ಪ್ರಾರಂಭಿಸಿದರು, ಇದೇ ಸಮಯಕ್ಕೆ ಆಗಮಿಸಿದ ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ಸಾರ್ವಜನಿಕರನ್ನು ಶಾಂತಪಡಿಸಿ ಮಧ್ಯಪಾನ ಮಾಡಿರುವ ಅಗ್ನಿಶಾಮಕ ಅಧಿಕಾರಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿ, ಅಗ್ನಿಶಾಮಕ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಸೂಕ್ತಕ್ರಮ ಜರುಗಿಸಲಾಗುವುದೆಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button