Kannada NewsKarnataka NewsLatest

*ಭೀಕರ ಅಪಘಾತದಲ್ಲಿ ಸುಟ್ಟು ಕರಕಲಾದ ಬಸ್: ಇಬ್ಬರು ಟೆಕ್ಕಿಗಳು ಸೇರಿ ಮೂವರು ಯುವತಿಯರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹತ್ತು ಜನರು ಸಜೀವದಹನವಾಗಿದ್ದಾರೆ. ಇಬ್ಬರು ಟೆಕ್ಕಿ ಸೇರಿ ಮೂವರು ಯುವತಿಯರು ಕಣ್ಮರೆಯಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚನ್ನರಾಯಪಟ್ಟಣದ ಅಂಕನಹಳ್ಳಿಯ ನವ್ಯಾ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಕಣ್ಮರೆಯಾದವರು. ಇಬ್ಬರೂ ಹಾಸನ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಬೆಂಗಳೂರಿನಂದ ಬುಧವಾರ ರಾತ್ರಿ ಸ್ನೇಹಿತೆ ಮಿಲನ ಜೊತೆ ಇಬ್ಬರೂ ಬಸ್ ಹತ್ತಿದ್ದರು. ಇದೀಗ ಬಸ್ ಅಪಘಾತದಲ್ಲಿ ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. ಬಸ್ ಹತ್ತಿದ್ದ ನವ್ಯಾ ಹಾಗೂ ಮಾನಸ ಕಣ್ಮರೆಯಾಗಿದ್ದಾರೆ. ಸ್ನೇಹಿತೆ ಮಿಲನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Home add -Advt

Related Articles

Back to top button