Karnataka News
ತಾಯಿ- ಮಗ ಸಾವು

ಪ್ರಗತಿ ವಾಹಿನಿ ಸುದ್ದಿ, ಮಂಡ್ಯ: ತಾಯಿ ಮತ್ತು ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಅಭಿನವ ಭಾರತಿ ಶಾಲೆಯ ನಿವೃತ್ತ ಶಿಕ್ಷಕಿ ವೀಣಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದರೆ, ವೀಣಾ ಅವರ ಮಗ ನಿತೀನ್ ಅವರ ಶವ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.
ನಗರದ ಕ್ರಿಶ್ಚಿಯನ್ ಕಾಲೋನಿಯ ಮನೆಯಲ್ಲಿ ವೀಣಾ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದು, ಮಗ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಆದರೆ, ಸೋಮವಾರ ಬೆಳಿಗ್ಗೆ ವೀಣಾ ಅವರ ಮಗ ನಿತಿನ್ ಅವರ ಮೃತದೇಹ ಮಂಡ್ಯ ನಗರದ ಸಮೀಪವಿರುವ ವಿ.ಸಿ. ಫಾರಂ ಗೇಟ್ ಬಳಿಯ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಈತ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ. ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.
https://pragati.taskdun.com/lokayukta-complaintinspectorefirebar/
|
|



