ಸಿದ್ದೇಶ್ವರ ಶ್ರೀಗಳ ಆರೋಗ್ಯ ಇನ್ನಷ್ಟು ಗಂಭೀರ : ಆಶ್ರಮದ ಬಳಿ ಭಾರೀ ಪೊಲೀಸ್ ಬಂದೋಬಸ್ತ್

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು, ಭಕ್ತರಲ್ಲಿ ತೀವ್ರ ಆತಂಕ ಮನೆಮಾಡಿದೆ.

ಸೋಮವಾರ ಮಧ್ಯಾಹ್ನದಿಂದಲೇ ಅವರ ಆರೋಗ್ಯ ಗಂಭೀರವಾಗುತ್ತ ಹೋಯಿತು. ಉಸಿರಾಟ ಮತ್ತು ನಾಡಿಮಿಡಿತದಲ್ಲಿ ಸಹ ಏರುಪೇರಾಯಿತು.  ಸಂಜೆಯ ಹೊತ್ತಿಗೆ ತೀರಾ ಗಂಭೀರವಾಗಿದೆ.  ಬೆಳಗ್ಗೆಯಿಂದಲೇ ಶ್ರೀಗಳು ಆಹಾರ ಸೇವಿಸುತ್ತಿಲ್ಲ.

Home add -Advt

ಮಠದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ಅವರನ್ನು ಸ್ವಾಮೀಜಿಗಳ ದರ್ಶನಕ್ಕೆ ಸಾಲಿನಲ್ಲಿ ಬಿಡಲು ವ್ಯವಸ್ಥೆ ಮಾಡಲಾಗುತ್ತಿದೆ,. ಭಾರೀ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಭಕ್ತರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ.

ಮಠದ ಸುತ್ತಲೂ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತಿದೆ.

 

ಭಕ್ತರ ಆತಂಕ, ಆಕ್ರಂದನ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಭಕ್ತರ ಸಂಖ್ಯೆ ಹಾಗೆಯೇ ಆತಂಕ ಕೂಡ ಹೆಚ್ಚಾಗುತ್ತಿದೆ.

 

ಸಿದ್ದೇಶ್ವರ ಶ್ರೀಗಳ ಸಧ್ಯದ ಆರೋಗ್ಯದ ಕುರಿತು ವೈದ್ಯರ ಮಾಹಿತಿ; ನಿಧಾನವಾದ ನಾಡಿಮಿಡಿತ, ಉಸಿರಾಟ

https://pragati.taskdun.com/doctors-information-about-siddeshwar-sris-current-health-slow-pulse-breathing/

Related Articles

Back to top button