Belagavi NewsBelgaum NewsKarnataka NewsLatest

*ಉದ್ಯಮಿ ಸಂತೋಷ್ ಪದ್ಮಣ್ಣವರ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್*

ಪತ್ನಿಯಿಂದಲೇ ಪತಿಯ ಹತ್ಯೆ?


ಪ್ರಗತಿವಾಹಿನಿ ಸುದ್ದಿ:
ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸರು ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ಶೋಭಿತ್ ಗೌಡಾ ಹಾಗೂ ಇನ್ನೋರ್ವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿ ಬೆಳಗಾವಿಗೆ ಕರೆ ತಂದು ವೈದ್ಯಕೀಯ ಪರೀಕ್ಷೆ ನಡೆಸಿ ಸ್ಥಳ ಮಹಜರು ನಡೆಸಲು ಸಿದ್ಧತೆ ನಡೆಸಿದ್ದಾರೆ.

ಸಂತೋಷ್ ಪತ್ನಿ ಉಮಾಳ ಫೇಸ್ ಬುಕ್ ಸ್ನೇಹಿತನಾಗಿದ್ದ ಶೋಭಿತ್ ಗೌಡಾಗೆ ಅ.9 ರಂದು ಉಮಾ ದೂರವಾಣಿ ಕರೆ ಮಾಡಿ ಎಲ್ಲ ಕೆಲಸ ಮುಗಿಸಿದ್ದೇನೆ. ನನಗೆ ದೈರ್ಯ ಸಾಲುತ್ತಿಲ್ಲ ಬನ್ನಿ ಎಂದು ಕರೆದು ಪತಿ ಸಂತೋಷಗೆ ನಿದ್ರೆ ಮಾತ್ರೆ ಹಾಕಿ ಉಸಿರು ಗಟ್ಟಿ ಕೊಲೆ ಮಾಡಲು ಯತ್ನಿಸಿದರೂ ಸಂತೋಷ್ ಮೃತಪಟ್ಟಿರಲ್ಲವಂತೆ. ಕೊನೆಗೆ ಸ್ನೇಹಿತರ ಸಹಾಯರಿಂದ ಉಮಾ, ಸಂತೋಷನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Home add -Advt

ಕೆಲವೇ ಕ್ಷಣದಲ್ಲಿ ಆಂಜನೇಯ ನಗರದಲ್ಲಿರುವ ಮೃತ ಸಂತೋಷ್ ಮನೆಯಲ್ಲಿ ಕೊಲೆಯ ಪ್ರಮುಖ ಆರೋಪಿ ಉಮಾಳನ್ನು ಬಂಧಿಸಲು ಪೊಲೀಸರು ತೆರಳಲಿದ್ದಾರೆ‌.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಮೃತ ಸಂತೋಷ್ ಮಗಳು ನೀಡಿದ ದೂರಿನ ಆಧಾರದ ಮೇಲೆ ಮಾಳಮಾರುತಿ ಸಿಪಿಐ ಕಾಲೇಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button