Belagavi NewsBelgaum NewsKarnataka News

*ನಾಳೆ ಬೆಳಗಾವಿಯಲ್ಲಿ ಕಸಾಯಿಖಾನೆ, ಮಾಂಸಾಹಾರಿ ಅಂಗಡಿ ಬಂದ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವ ಜಯಂತಿ ಪ್ರಯುಕ್ತ ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಬಂದ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ.

ಏಪ್ರೀಲ್ 30, ಬುಧವಾರ ಬಸವ ಜಯಂತಿ ನಿಮಿತ್ತ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳನ್ನು ಬಂದು ಮಾಡಿ ಸಹಕರಿಸುವಂತೆ ಕೋರಲಾಗಿದೆ.

ಸದರಿ ದಿನದಂದು ಕಸಾಯಿಖಾನೆ/ಮಾಂಸಾಹಾರಿ ಅಂಗಡಿ ಮಾಲೀಕರು ಆದೇಶವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button