Latest

ಗುರುವಾರ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ  (ಫೆ.7) ಅಭಿಪ್ರೇರಣಾ ಶಿಬಿರ ಆಯೋಜಿಸಲಾಗಿದೆ.

ಮರಾಠಾ ಮಂದಿರ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಈ ಅಭಿಪ್ರೇರಣಾ ಶಿಬಿರವನ್ನು ಡಿಡಿಪಿಆಯ್ ಎ. ಬಿ. ಪುಂಡಲಿಕ್ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಡಿ. ಬಡಿಗೇರ ಉಪಸ್ಥಿತರಿರುವರು.

 ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಎಮ್. ಆಯ್. ಪೂಜಾರ ಹಾಗೂ ಡಾ. ಗುರುರಾಜ ಬುಲಬುಲೆ ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ. 10ನೇ ತರಗತಿಯ ಮಕ್ಕಳನ್ನು ಮುಂಜಾನೆ 9.30ಕ್ಕೆ ಹಾಜರಿರಲು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಡಿ. ಬಡಿಗೇರ ಸೂಚಿಸಿದ್ದಾರೆ.

———-

Home add -Advt

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ, ನಿರಂತರ ಸುದ್ದಿಗಳಿಗಾಗಿ ಲಿಂಕ್ ನಲ್ಲಿ ಕಾಣುವ ಬೆಲ್ ಪ್ರೆಸ್ ಮಾಡಿ ಉಚಿತವಾಗಿ ಸಬ್ ಸ್ಕ್ರೈಬ್ ಆಗಿ)

Related Articles

Back to top button