Cancer Hospital 2
Bottom Add. 3

*KPCC ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ; ಸಿ.ಟಿ.ರವಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗುತ್ತಿಗೆದಾರರು, ಯೋಜನೆಗೆ ಮಾತ್ರ ಕಮಿಷನ್ ದಂಧೆ ಸೀಮಿತವಾಗಿಲ್ಲ. ಕಲಾವಿಧರ ಗೌರವ ಧನದವರೆಗೆ ಈ ದಂಧೆ ಮುಂದುವರೆದಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ದಸರಾದಲ್ಲಿಯೂ ವಸೂಲಿಗೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮುಕ್ತ ಸರ್ಕಾರ ಅಂತಾರೆ. ಆದರೆ ಸಿದ್ದರಾಮಯ್ಯ ಅವರ ಮೂಗಿನ ಕೆಳಗೆ ಈ ಗಘನೆ ನಡೆದಿದೆ ಎಂದರು.

ಕೆಪಿಸಿಸಿ ಅಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ. ಕಾಂಗ್ರೆಸ್ಸಿಗರು ಬೇನಾಮಿಗಳನ್ನು ರಾಜ್ಯಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಅಕ್ರಮ ಚಟುವಟಿಕೆ ನಡೆಸಲು ಬೇನಾಮಿಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.


Bottom Add3
Bottom Ad 2

You cannot copy content of this page