Kannada NewsKarnataka NewsLatest

*IT ಅಧಿಕಾರಿಗಳಿಂದ ಮತ್ತೊಂದು ಭರ್ಜರಿ ಬೇಟೆ; ಬಿಲ್ಡರ್ ಮನೆಯಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ಹಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮಾಜಿ ಕಾರ್ಪೊರೇಟರ್ ಅಶ್ವತ್ಥಮ್ಮ ಪತಿ ಅಂಬಿಕಾ ಪತಿ ಸಹೋದರ ಪ್ರಸಾದ್ ಮನೆಯಲ್ಲಿ 42 ಕೋಟಿಗೂ ಅಧಿಕ ಹಣ ಪತ್ತೆ ಮಾಡಿದ್ದ ಐಟಿ ಅಧಿಕಾರಿಗಳು ಇದೀಗ ಬಿಲ್ಡರ್ ಓರ್ವರ ಮನೆ ಮೇಲೆ ದಾಳಿ ನಡೆಸಿ 40 ಕೋಟಿಗೂ ಅಧಿಕ ಹಣ ವಶಕ್ಕೆ ಪಡೆದಿದ್ದಾರೆ.

ಬಿಲ್ಡರ್ ಸಂತೋಷ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮತ್ತೆ 40 ಕೋಟಿಗು ಅಧಿಕ ಹಣ ಜಪ್ತಿ ಮಾಡಿದ್ದು, ಸಂತೋಷ್ ಅವರನ್ನು ವಿಚರಣೆ ನಡೆಸಿದ್ದಾರೆ. ಈ ವೇಳೆ ಸಂತೋಷ್ ಮಾಜಿ ಎಂಎಲ್ ಸಿ ಓರ್ವರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

Home add -Advt

ರಾಜಾಜಿನಗರದ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಬಿಲ್ಡರ್ ಸಂತೋಷ್ ಗೆ ಸೇರಿದ ಅಪಾರ್ಟ್ ಮೆಂಟ್ ನ 5ನೇ ಮಹಡಿಯಲ್ಲಿ ಜಾಲಾಡಿದ್ದರು. ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.


Related Articles

Back to top button