LatestUncategorized

*ಅವರು ಪಕ್ಷ ತೊರೆದು ಯಾವ ಮೆಸೇಜ್ ನೀಡಿದ್ರು?; ನಂಬಬಾರದವರ ಮೇಲೆ ನಂಬಿಕೆ ಇಟ್ಟಿದ್ವಾ…? ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದ ಸಿ.ಟಿ.ರವಿ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ದುರದೃಷ್ಟಕರ. ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನೆಲ್ಲ ಸ್ಥಾನ ನಿದಬೇಕು ಅದೆಲ್ಲವನ್ನೂ ಬಿಜೆಪಿ ಅವರಿಗೆ ಕೊಟ್ಟಿತ್ತು. ಅದರೂ ಶೆಟ್ಟರ್ ಪಕ್ಷ ತೊರೆದಿದ್ದಾರೆ ಎಂದು ಬಿಜೆಪಿ ರಾಶ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದದರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಶೆಟ್ಟರ್ ಬಿಜೆಪಿ ತೊರೆದು ಯಾವ ಮೆಸೆಜ್ ಕೊಟ್ರು? ಸೈದ್ಧಾಂತಿಕವಾಗಿ ಅವರು ಬಿಜೆಪಿ ಜೊತೆ ಇರಲಿಲ್ವ? ವೈಯಕ್ತಿಕ ಲಾಭ-ನಷ್ಟ ಲೆಕ್ಕ ಹಾಕಿ ನನಗೆ ಲಾಭ ಆದ್ರೆ ಮಾತ್ರ ಬಿಜೆಪಿ, ಇನ್ನೊಬ್ಬರಿಗೆ ಆದ್ರೆ ಬಿಜೆಪಿ ಅಲ್ಲ ಎಂಬ ಮನ:ಸ್ಥಿತಿ ಆಶ್ಚರ್ಯ ತರಿಸಿದೆ. ಶೆಟ್ಟರ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದರು.

ಒಂದು ಪಕ್ಷ ನಷ್ತವನ್ನು ರಿಕವರಿ ಮಾಡಿಕೊಳ್ಳಬಹುದು. ಆದರೆ ವ್ಯಕ್ತಿ ರಿಕವರಿ ಮಾದಿಕೊಳ್ಳಲು ಸಾಧ್ಯವಿಲ್ಲ. ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಕುಟುಂಬ ಎಂಬ ಹೆಗ್ಗಳಿಕೆಯಿಮ್ದ ದೂರ ಆಗಿದ್ದಾರೆ ಎಲ್ಲವನ್ನು ಅನುಭವಿಸಿ ಈಗ ಪಕ್ಷ ತೊರೆದಿರುವುದು ಸರಿಯಲ್ಲ ಎಂದು ಗುಡುಗಿದರು.

ಯಾರಿಂದ ಹಾನಿಯಾಗಿಲ್ಲ ಎನ್ನುವಂತಿಲ್ಲ. ಭಾಗಶ: ಹಾನಿ ಒಬ್ಬ ಕಾರ್ಯಕರ್ತ ಹೋದರೂ ಆಗುತ್ತೆ. ಎಲ್ಲವನ್ನೂ ಪಡೆದು ಹೀಗೆ ಮಾಡುವುದು ಇತಿಹಾಸದಲ್ಲಿ ಕಪ್ಪು ಚುಕ್ಕೆ. ಸೋತರೂ ಲಕ್ಷ್ಮಣ ಸವದಿಗೆ ಎಂ ಎಲ್ ಸಿ ಮಾಡಿದೆವು, ಉಪಮುಖ್ಯಮಂತ್ರಿ ಮಾಡಿದೆವು. ಸೋತಾಗಲೇ ಅವಕಾಶವನ್ನು ನೀಡಿದ ಪಕ್ಷ ಇನ್ನಷ್ಟು ಅವಕಾಶ ನೀಡುತ್ತಿತ್ತು. ಯಾರ ಮೇಲೆ ನಂಬಿಕೆ ಇಡಬಾರದಿತ್ತು ಅಂತವರ ಮೇಲೆ ನಂಬಿಕೆ ಇಟ್ಟಿದ್ವಾ? ಎಂಬ ಅನುಮಾನ ಕಾಡುತ್ತೆ. ಈ ಬೆಳವಣಿಗೆ ಬಗ್ಗೆ ಅವಲೋಕನ ಮಾಡುತ್ತೇವೆ ಎಂದು ಹೇಳಿದ್ದಾರೆ.

Home add -Advt
https://pragati.taskdun.com/d-k-shivakumarreactionjagadish-shettarbjp-join/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button