Latest

ಜಮೀರ್ ಗೆ ಕೊಲಂಬೋದಲ್ಲಿ ಜ್ಞಾನೋದಯವಾದಂತಿದೆ: ಸಿ.ಟಿ ರವಿ ತಿರುಗೇಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನಸ್ಸಿನ ಶಾಂತಿಗಾಗಿ ಕೊಲಂಬೋ ಪ್ರವಾಸ ಹೋಗಿದ್ದೆ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಕೊಲಂಬೋಗೆ ಹೋದರೆ ಯಾವ ರೀತಿಯ ಶಾಂತಿ ಸಿಗುತ್ತೆ ಎಂಬುದನ್ನು ಜಮೀರ್ ಅವರೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊಲೊಂಬೋದಲ್ಲಿ ಜಮೀರ್​​​​​ಗೆ ತಪಸ್ಸು ಮಾಡಲು ಜಾಗ ಇರಬಹುದೇನೋ, ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ, ಜಮೀರ್​ಗೆ ಕೊಲೊಂಬೋದಲ್ಲಿ ಜ್ಞಾನೋದಯವಾಗುವುದೇನೋ, ಅಲ್ಲಿ ಹೇಗೆ ಶಾಂತಿ ಸಿಗುತ್ತೆ? ಅಲ್ಲೇನಿದೆ ಎಂಬುದನ್ನು ಅವರೇ ಹೇಳಲಿ ಎಂದರು.

ಜಮೀರ್ ಅಹ್ಮದ್ ಅವರಿಗೆ ಸುಳ್ಳೇ ಮನೆ ದೇವರು. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಆಗುವುದಾಗಿ ಹೇಳಿದ್ದರು. ಜಮೀರ್ ಯಾವಾಗ ಯಡಿಯೂರಪ್ಪ ಮನೆ ಮುಂದೆ ಸೆಕ್ಯೂರಿಟಿ ಆಗ್ತಾರೆ ಅಂತ ಕಾಯ್ತಾ ಇದ್ದೀನಿ ಎಂದು ಲೇವಡಿ ಮಾಡಿದ್ದಾರೆ.

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಫಾಝಿಲ್ ಜತೆ ಜಮೀರ್ ಅಹ್ಮದ್, ಸಿದ್ದರಾಮಯ್ಯ ಇರುವ ಫೋಟೋಗಳನ್ನು ಪ್ರದರ್ಶಿಸಿರುವ ಸಚಿವರು ಈ ಫೋಟೋ ಇವರುಗಳ ಜತೆ ಇರುವ ಆತ್ಮೀಯ ಸಂಬಂಧವನ್ನು ಹೇಳುತ್ತೆ. ಇದು ಅಪರಿಚಿತರ ಜತೆ ತೆಗೆಸಿಕೊಂಡ ಫೋಟೋವಂತೂ ಅಲ್ಲವೇ ಅಲ್ಲ ಎಂದು ಹೇಳಿದರು.

Home add -Advt

Related Articles

Back to top button