
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕಮಿಷನರ್ ವ್ಯಾಪ್ತಿಯ ಕ್ಯಾಂಪ್ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಮಲ್ಲಸರ್ಜ ಅಂಕಲಗಿ (45) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಲ್ಲಸರ್ಜ ಅವರು ಎಂದಿನಂತೆ ಕರ್ತವ್ಯ ಮುಗಿಸಿಕೊಂಡು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಇಂದು ತಡವಾದರೂ ಏಳದ ಅವರನ್ನು ಮನೆಯವರು ಎಬ್ಬಿಸಲು ಹೋದಾಗ ವಿಷಯ ಗೊತ್ತಾಗಿದೆ.
ಅವರ ಅಕಾಲಿಕ ನಿಧನಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತಪಾ ವ್ಯಕ್ತಪಡಿಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಎಲ್ಲ ಸಿಬ್ಬಂದಿಗಳಿಗೆ ಅಚ್ಚು ಮೆಚ್ಚಾಗಿದ್ದರು. ಮಲ್ಲಸರ್ಜ ಅವರ ನಿಧನದಿಂದ ಅವರ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ.