Belagavi NewsBelgaum NewsElection NewsKannada NewsKarnataka NewsPolitics

*ಬಿಜೆಪಿ ಶಾಲು,ಚಿಹ್ನೆ ಧರಿಸಿ ಮತಗಟ್ಟೆಯ ಬಳಿ ಪ್ರಚಾರ: ಕೈ ಅಭ್ಯರ್ಥಿ ಡಾ. ಅಂಜಲಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಖಾನಾಪುರದ ನಿಟ್ಟೂರು ಮತಗಟ್ಟೆ 125 ರ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಮತಗಟ್ಟೆ ಬಳಿ ಬಿಜೆಪಿ ಶಾಲು, ಚಿಹ್ನೆ ಮತ್ತು ಟೋಪಿಗಳನ್ನು ಹಾಕಿ ಪ್ರಚಾರ ಮಾಡುತಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಡಾ.‌ ಅಂಜಲಿ ನಿಂಬಾಳಕರ್ ಕಿಡಿಕಾರಿದ್ದಾರೆ. 

Home add -Advt

ಖಾನಾಪುರದ ನಿಟ್ಟೂರು ಮತಗಟ್ಟೆ 125 ರ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಮತಗಟ್ಟೆ ಬಳಿ ಬಿಜೆಪಿ ಶಾಲು, ಚಿಹ್ನೆ ಮತ್ತು ಟೋಪಿಗಳನ್ನು ಹಾಕಿಕೊಂಡು ಪ್ರಚಾರ ಮಾಡಲಾಗಿದೆ. ನೀತಿ ಸಂಹಿತೆ ಪ್ರಕಾರ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಚಿನ್ಹೆ ಕಾಣುವಂತಿಲ್ಲ ಆದರೆ ಬಿಜೆಪಿ ಕಾರ್ಯಕರ್ತರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಡಾ. ಅಂಜಲಿ ನಿಂಬಾಳಕರ್ ಗರಂ ಆಗಿದ್ದಾರೆ.‌

ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ ಎಂದು ಡಾ. ಅಂಜಲಿ ನಿಂಬಾಳ್ಕರ್ ಕಿಡಿಕಾರಿದರು. ಮತಗಟ್ಟೆ ಬಳಿ ಪ್ರಚಾರಕ್ಕೆ ಅವಕಾಶ ಮಾಡಿಕೊಡದಂತೆ ಚುನಾವಣಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

Related Articles

Back to top button