ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ಸೇವೆಗೆ 2005ರ ನತಂರ ಸೇರ್ಪಡೆಯಾದ ನೌಕರರಿಗೆ ಹಳೆಯ ಪಿಂಚಣಿ ರದ್ದುಪಡಿಸಿ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆಯೇ?
ಕಾಂಗ್ರೆಸ್ ನ ಅಜಯ ಧರ್ಮಸಿಂಗ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಕೇಳಿದ ಪ್ರಶ್ನೆ ಇದೆ. ಇದಕ್ಕೆ ಮುಖ್ಯಮಂತ್ರಿಗಳು ನೀಡುವ ಉತ್ತರ “ಹೌದು”
ಪೂರಕ ಪ್ರಶ್ನೆಗಳು:
ಬಂದಿದ್ದಲ್ಲಿ ಈ ನೌಕರರಿಗೆ ಅಳವಡಿಸಲಾಗಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಗೆ ಅಳವಡಿಸಲು ಸರಕಾರ ಕ್ರಮ ಕೈಗೊಳ್ಳುವುದೇ?
ಹಾಗಿದ್ದಲ್ಲಿ ಯಾವ ಕಾಲಮಿತಿಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಅಳವಡಿಸಿ ಈ ನೌಕರರಿಗೆ ನ್ಯಾಯ ಒದಗಿಸಲಾಗುವುದು?
ಇಲ್ಲಿದಿದ್ದಲ್ಲಿ ಕಾರಣಗಳೇನು?
ಮುಖ್ಯಮಂತ್ರಿಗಳ ಉತ್ತರ:
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೂಕ್ತ ಬದಲಾವಣೆ/ ಮಾರ್ಪಾಡು ಮಾಡಲು 2018ರಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿಯನ್ನು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿಗಳ ಗಮನಕ್ಕೆ,
ವಿಪರ್ಯಾಸವೆಂದರೆ, 3 ವರ್ಷವಾದರೂ ಈ ಸಮಿತಿ ಸಭೆಗಳನ್ನೇ ನಡೆಸುತ್ತಿಲ್ಲ, ಹಾಗಾಗಿ ಸರಕಾರಿ ನೌಕರರ ಅತ್ಯಂತ ಪ್ರಮುಖವಾದ ಈ ಬೇಡಿಕೆ ಈಡೇರುತ್ತಿಲ್ಲ. ಈ ಸಮಿತಿಯನ್ನು ವಿಸರ್ಜಿಸಿ ಹೊಸದಾಗಿ ಸಮಿತಿ ನೇಮಿಸುವ ಅಥವಾ ಹಳೆಯ ಪಿಂಚಣಿ ವ್ಯವಸ್ಥೆ ಮರು ಸ್ಥಾಪನೆಗೆ ಸರಕಾರ ನಿರ್ಧರಿಸಬೇಕು ಎನ್ನುವುದು ಸರಕಾರಿ ನೌಕರರ ಬೇಡಿಕೆಯಾಗಿದೆ. ತುರ್ತಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳ ಸಮಿತಿಯ ಪ್ರಸಕ್ತ ಸ್ಥಿತಿ ಗತಿ, ಕಾರ್ಯವೈಖರಿ ಕುರಿತು ಮಾಹಿತಿ ಪಡೆಯಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ