ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉಕ್ರೇನ್- ರಷ್ಯಾ ಯುದ್ಧದ ನಡುವೆಯೇ ಭಾರತ ಸರಕಾರ ಆಪರೇಶನ್ ಗಂಗಾ ಮೂಲಕ ಬಹುತೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಯಶಸ್ವಿಯಾಗಿದೆ. ಇನ್ನೊಂದೆಡೆ ಭಾರತ ಸರರ್ಕಾರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಎಡವಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಈ ನಡುವೆ ಉಕ್ರೇನ್ನಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವ ಪಿಯೂಷ್ ಗೋಯಲ್, ಉಕ್ರೇನ್ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ವಾಪಸ್ ಬರುವ ಕುರಿತು ಸಲಹೆ ನೀಡಲಾಗಿದ್ದರೂ ಹೆಚ್ಚಿನ ವಿದ್ಯಾರ್ಥಿಗಳು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದಿದ್ದಾರೆ.
ಫೆ.೧೫ರಂದೇ ವಿದ್ಯಾರ್ಥಿಗಳಿಗೆ ಭಾರತಕ್ಕೆ ವಾಪಸ್ ಬರುವ ಬಗ್ಗೆ ಸಲಹೆ ನೀಡಲಾಗಿತ್ತು. ಆ ಬಳಿಕವೂ ಯುದ್ಧ ಪ್ರಾರಂಭವಾಗುವ ಮುಂಚೆ ೨ ಬಾರಿ ಸಲಹೆ ನೀಡಲಾಗಿತ್ತು. ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ೪ ಸಾವಿರ ಜನ ಯುದ್ಧ ಪ್ರಾರಂಭವಾಗುವ ಮೊದಲೇ ವಾಪಸ್ ಬಂದಿದ್ದಾರೆ.
ಆದರೆ ಬಹುತೇಕ ವಿದ್ಯಾರ್ಥಿಗಳು ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ ಅವರ ವಿಶ್ವ ವಿದ್ಯಾಲಯಗಳೂ ಏನೂ ಆಗುವುದಿಲ್ಲ ಎಂಬ ಮನೋಸ್ಥಿತಿಯಲ್ಲಿದ್ದ ಕಾರಣ ವಾಪಸ್ ತವರಿಗೆ ಹೋಗುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ನೀಡಿರಲಿಲ್ಲ. ಪರಿಣಾಮ ಬಹಳಷ್ಟು ವಿದ್ಯಾರ್ಥಿಗಳು ಯುದ್ಧದ ನಾಡಿನಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದಿದ್ದಾರೆ.
NPS ರದ್ಧು ಮಾಡಿ OPS ಜಾರಿ ಮಾಡುತ್ತೀರಾ? ನೇರ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸದನದಲ್ಲಿ ಉತ್ತರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ