
ಪ್ರಗತಿವಾಹಿನಿ ಸುದ್ದಿ : ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀರ್ವತೆಗೆ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಗೋಪಾಲ್ (60) ಅವರ ಪತ್ನಿ ಶಶಿಕಲಾ( 55) ಹಾಗೂ ಪುತ್ರಿ ದೀಪಾ (30) ಮೃತ ದುರ್ದೈವಿಗಳು. ದೀಪಾ ಅವರ ಇಬ್ಬರು ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಬದುಕುಳಿದಿದ್ದಾರೆ.
ಕುಟುಂಬಸಮೇತ ಗೋಪಾಲ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ದಾಬಸ್ ಪೇಟೆ ಬಳಿ ಕಾರು ನಿಯಂತ್ರಣ ಕಳೆದುಕೊಂಡು ಮೇಲ್ವೇತುವೆ ಬದಿಯ ಗೋಡೆಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.