
ಪ್ರಗತಿವಾಹಿನಿ ಸುದ್ದಿ: ಸ್ನಾನಕ್ಕೆಂದು ಪುಷ್ಕರಣಿಗೆ ಇಳಿದಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಕಾಲಕಾಲೇಶ್ವರ ದೇವಾಲಯದಲ್ಲಿ ನಡೆದಿದೆ.
ಶರಣಪ್ಪ (೨೨) ಮೃತ ಯುವಕ. ಕಾಲಕಾಲೇಶ್ವರ ಜಾತ್ರೆಗೆಂದು ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಸ್ನಾನಕ್ಕೆಂದು ಪುಷ್ಕರಣಿಗೆ ಇಳಿದಿದ್ದಾನೆ. ಪುಷ್ಕರಣಿಯ ಮೆಟ್ಟಿಲುಗಳ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ. ಬಕೆಟ್ ಗೆ ನೀರು ತುಂಬಿಕೊಳ್ಳುವಾಗ ಆಯತಪ್ಪಿ ಪುಷ್ಕರಣಿಗೆ ಬಿದ್ದಿದ್ದಾನೆ. ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗಜೇಂದ್ರಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



