Belagavi NewsBelgaum NewsKannada NewsKarnataka NewsNationalPoliticsTravel

*ಬೆಳಗಾವಿಗೆ ಮೂರು ಹೋಸ ಎಕ್ಸ್‌ಪ್ರೆಸ್ ರೈಲುಗಳ ಆರಂಭ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್, ಸಿಕಂದರಾಬಾದ್ ಮತ್ತು ಚರ್ಲಪಲ್ಲಿಯನ್ನು ಬೆಳಗಾವಿಯೊಂದಿಗೆ ಸಂಪರ್ಕಿಸುವ ಮೂರು ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಆರಂಭಿಸುವುದಾಗಿ ತಿಳಿಸಿದೆ. 

ಇದು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ರೈಲು ಸಂಪರ್ಕವನ್ನು ವೃದ್ಧಿಸಲಿದೆ. 

Related Articles
Home add -Advt

ಪರಿಚಯಿಸಲಾದ ರೈಲುಗಳ ವಿವರ ಹೀಗಿದೆ

ರೈಲು ಸಂಖ್ಯೆ 17071/17072 ಹೈದರಾಬಾದ್–ಬೆಳಗಾವಿ–ಹೈದರಾಬಾದ್ ಸಾಪ್ತಹಿಕ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17073/17074 ಸಿಕಂದರಾಬಾದ್–ಬೆಳಗಾವಿ–ಸಿಕಂದರಾಬಾದ್ ಸಾಪ್ತಹಿಕ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17075/17076 ಚರ್ಲಪಲ್ಲಿ–ಬೆಳಗಾವಿ–ಚರ್ಲಪಲ್ಲಿ ಸಾಪ್ತಹಿಕ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ. 

ವಿವರಗಳು ಈ ಕೆಳಗಿನಂತಿವೆ

ರೈಲು ಸಂಖ್ಯೆ 17071/17072 ಹೈದರಾಬಾದ್ – ಬೆಳಗಾವಿ – ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17071 ಹೈದರಾಬಾದ್–ಬೆಳಗಾವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 21, 2026 ರಿಂದ ಚಾಲನೆಗೊಳ್ಳಲಿದ್ದು, ಪ್ರತಿ ಗುರುವಾರ ಹೈದರಾಬಾದ್‌ನಿಂದ 16:30 ಗಂಟೆಗೆ ಹೊರಟು, ಮರುದಿನ 10:30 ಗಂಟೆಗೆ ಬೆಳಗಾವಿ ತಲುಪಲಿದೆ. ಮರು ಪ್ರಯಾಣದ ರೈಲು ಸಂಖ್ಯೆ 17072 ಬೆಳಗಾವಿ–ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 15, 2026 ರಿಂದ ಆರಂಭವಾಗಲಿದ್ದು, ಪ್ರತಿ ಶುಕ್ರವಾರ ಬೆಳಗಾವಿಯಿಂದ 13:00 ಗಂಟೆಗೆ ಹೊರಟು, ಮರುದಿನ 07:00 ಗಂಟೆಗೆ ಹೈದರಾಬಾದ್ ತಲುಪಲಿದೆ

ಈ ರೈಲು ಒಟ್ಟು 22 ಎಲ್ಎಚ್’ಬಿ ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ಒಂದು ಹವಾನಿಯಂತ್ರಿತ ಪ್ರಥಮ ದರ್ಜೆ ಬೋಗಿ, ಮೂರು ಹವಾನಿಯಂತ್ರಿತ ದ್ವಿತೀಯ ದರ್ಜೆ ಬೋಗಿಗಳು, ನಾಲ್ಕು ಹವಾನಿಯಂತ್ರಿತ ತೃತೀಯ ದರ್ಜೆ ಬೋಗಿಗಳು, ಏಳು ಸ್ಲೀಪರ್ ಕ್ಲಾಸ್ ಬೋಗಿಗಳು, ಒಂದು ಪ್ಯಾಂಟ್ರಿ ಕಾರ್ (ಅಡುಗೆ) ಬೋಗಿ, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, ಒಂದು ದಿವ್ಯಾಂಗ್ ಸ್ನೇಹಿ ಇರುವ ಲಗೇಜು ಕಮ್ ಬ್ರೇಕ್ ವ್ಯಾನ್ ಹಾಗೂ ಒಂದು ಲಗೇಜು ಕಮ್ ಜನರೇಟರ್ ಮತ್ತು  ಬ್ರೇಕ್ ವ್ಯಾನ್‌ಗಳು ಇರಲಿವೆ.

ರೈಲು ಸಂಖ್ಯೆ 17073/17074 ಸಿಕಂದರಾಬಾದ್ – ಬೆಳಗಾವಿ – ಸಿಕಂದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17073 ಸಿಕಂದರಾಬಾದ್–ಬೆಳಗಾವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 18, 2026 ರಿಂದ ಪ್ರತಿ ಸೋಮವಾರ ಸಿಕಂದರಾಬಾದ್‌ನಿಂದ 16:30 ಗಂಟೆಗೆ ಹೊರಟು, ಮರುದಿನ 10:30 ಗಂಟೆಗೆ ಬೆಳಗಾವಿ ತಲುಪಲಿದೆ. ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 17074 ಬೆಳಗಾವಿ–ಸಿಕಂದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 19, 2026 ರಿಂದ ಪ್ರತಿ ಮಂಗಳವಾರ ಬೆಳಗಾವಿಯಿಂದ 13:00 ಗಂಟೆಗೆ ಹೊರಟು, ಮರುದಿನ 07:15 ಗಂಟೆಗೆ ಸಿಕಂದರಾಬಾದ್ ತಲುಪಲಿದೆ.

ಈ ರೈಲು 22 ಎಲ್ಎಚ್’ಬಿ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಎರಡು ಹವಾನಿಯಂತ್ರಿತ ದ್ವಿತೀಯ ದರ್ಜೆ ಬೋಗಿಗಳು, ಏಳು ಹವಾನಿಯಂತ್ರಿತ ತೃತೀಯ ದರ್ಜೆ ಬೋಗಿಗಳು, ಏಳು ಸ್ಲೀಪರ್ ಕ್ಲಾಸ್ ಬೋಗಿಗಳು, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಒಂದು ದಿವ್ಯಾಂಗ್  ಸ್ನೇಹಿ ಇರುವ ಲಗೇಜ್-ಕಮ್-ಬ್ರೇಕ್ ವ್ಯಾನ್ ಹಾಗೂ ಒಂದು ಲಗೇಜ್-ಕಮ್-ಜನರೇಟರ್ ಕಾರ್ ಮತ್ತು ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರಲಿದೆ.

ರೈಲು ಸಂಖ್ಯೆ 17075/17076 ಚರ್ಲಪಲ್ಲಿ – ಬೆಳಗಾವಿ – ಚರ್ಲಪಲ್ಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17075 ಚರ್ಲಪಲ್ಲಿ–ಬೆಳಗಾವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 16, 2026 ರಿಂದ ಪ್ರತಿ ಶನಿವಾರ ಚರ್ಲಪಲ್ಲಿಯಿಂದ 16:00 ಗಂಟೆಗೆ ಹೊರಟು, ಭಾನುವಾರ 10:30ಕ್ಕೆ ಬೆಳಗಾವಿ ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 17076 ಬೆಳಗಾವಿ–ಚರ್ಲಪಲ್ಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮೇ 17, 2026 ರಿಂದ ಪ್ರತಿ ಭಾನುವಾರ ಬೆಳಗಾವಿಯಿಂದ 13:00 ಗಂಟೆಗೆ ಹೊರಟು, ಸೋಮವಾರ 08:45ಕ್ಕೆ ಚರ್ಲಪಲ್ಲಿ ತಲುಪಲಿದೆ. 

ಈ ರೈಲು 24 ಐಸಿಎಫ್ ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಮೂರು ಹವಾನಿಯಂತ್ರಿತ ದ್ವಿತೀಯ ದರ್ಜೆ ಬೋಗಿಗಳು, ಐದು ಹವಾನಿಯಂತ್ರಿತ  ತೃತೀಯ ದರ್ಜೆ ಬೋಗಿಗಳು, ಹತ್ತು ಸ್ಲೀಪರ್ ಕ್ಲಾಸ್  ಬೋಗಿಗಳು, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಬೋಗಿಗಳಿರಲಿವೆ..

ಮೇಲಿನ ಎಲ್ಲಾ ರೈಲುಗಳು ಎರಡೂ ಮಾರ್ಗಗಳಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಬಳ್ಳಾರಿ, ದರೋಜಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ರೈಲು ಸಂಖ್ಯೆ 17075/17076 ಸಿಕಂದರಾಬಾದ್ ನಿಲ್ದಾಣದಲ್ಲಿಯೂ ನಿಲುಗಡೆ ನೀಡಲಿದೆ. 

ಪ್ರತಿ ನಿಲ್ದಾಣದ ಆಗಮನ ಮತ್ತು ನಿರ್ಗಮನದ ಸಮಯವನ್ನು ವಿವರವಾಗಿ ತಿಳಿಯಲು ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Related Articles

Back to top button