*ಬೈಕ್ ಗೆ ಗುದ್ದಿದ ಕಾರ್: ಕೃಷ್ಣಾ ನದಿಗೆ ಹಾರಿ ಬಿದ್ದ ಬೈಕ್ ಸವಾರ*

ಪ್ರಗತಿವಾಹಿನಿ ಸುದ್ದಿ: ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೃಷ್ಣ ನದಿಗೆ ಹಾರಿ ಬಿದ್ದು ನಾಪತ್ತೆಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಚಾಲಕನೋರ್ವ ಅಜಾಗರೂಕತೆಯಿಂದ ಜುರಾಲಾ ಪ್ರಾಜೆಕ್ಟ್ ಬ್ಯಾರೇಜ್ ಮೇಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಪತ್ತೆಯಾದ ಯುವಕನನ್ನು ಬೂಡಿದಪಾಡು ಗ್ರಾಮದ ಮಹೇಶ್ (21) ಎಂದು ಗುರುತಿಸಲಾಗಿದೆ.
ಮಹೇಶ್ ಹಾಗೂ ಜಾನಕಿರಾಮ್ ಇಬ್ಬರು ಬೈಕ್ ನಲ್ಲಿ ಸಾಗುತ್ತಿರುವಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಗುದ್ದಿಕೊಂಡು ಸಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಮಹೇಶ್ ಹಾರಿ ಕೃಷ್ಣ ನದಿಗೆ ಹಾರಿ ಬಿದ್ದಿದ್ದು ಮತ್ತೋರ್ವ ಸವಾರ ಜಾನಕಿರಾಮ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುವನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಘಟನೆಗೆ ಕಾರು ಚಾಲಕನ ಅತಿ ವೇಗ ಹಾಗೂ ಮೊಬೈಲ್ ನೋಡಿಕೊಂಡು ಚಾಲನೆ ಮಾಡಿದ್ದೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇದೊಂದು ಹಿಟ್ ಅಂಡ್ ರನ್ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು ನಾಪತ್ತೆಯಾದವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ತೆಲಂಗಾಣದ ಧರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.