ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪೋಲೀಸರಿಂದ ‘ಭಾರತದ ಅತಿದೊಡ್ಡ ಕಾರುಗಳ್ಳ’ ಎಂದು ಕರೆಯಲ್ಪಟ್ಟ ಅನಿಲ್ ಚೌಹಾಣ್ ಮೂವರು ಪತ್ನಿಯರನ್ನು ಹೊಂದಿದ್ದು ಈ ಪೈಕಿ ಇಬ್ಬರಿಗೆ ಈತ ಕಾರುಗಳ್ಳ ಎಂಬುದೇ ಗೊತ್ತಿರಲಿಲ್ಲವಂತೆ.
ಈ ವಿಷಯ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಈತ 10 ಕೋಟಿ ಮೌಲ್ಯದ ವಿಲ್ಲಾ ಹೊಂದಿದ್ದು ಮೂರು ಹೆಂಡತಿಯರು ಮತ್ತು ಏಳು ಮಕ್ಕಳನ್ನು ಹೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಚೌಹಾಣ್ 24 ವರ್ಷಗಳಲ್ಲಿ 5,000 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದು ಕೊಲೆ, ಕಳ್ಳಸಾಗಣೆ ಸೇರಿದಂತೆ 181 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆತನ ಇಬ್ಬರು ಪತ್ನಿಯರು ಚೌಹಾಣ್‌ನ ಅಪರಾಧ ಚಟುವಟಿಕೆಗಳ ಬಗ್ಗೆ ತಮಗೆ ತಿಳಿದಿರಲಿಲ್ಲ ಮತ್ತು ಆತನನ್ನು ಕಾರ್ ಡೀಲರ್ ಎಂದು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈತನನ್ನು ದೆಹಲಿ ಪೊಲೀಸರು ಮೊನ್ನೆಯಷ್ಟೇ ಬಂಧಿಸಿದ್ದರು.
ಭಾರತದ ಅತಿ ದೊಡ್ಡ ಕಾರುಗಳ್ಳನ ಬಂಧನ: ಈತ ಕದ್ದ ಕಾರುಗಳೆಷ್ಟು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ