GIT add 2024-1
Laxmi Tai add
Beereshwara 33

*ಬೆಳಗಾವಿಯಲ್ಲಿ ಸರಣಿ ಅಪಘಾತ; ಸಾವಿನ ಸಂಖ್ಯೆ 6ಕ್ಕೇರಿಕೆ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಬಳಿ ಜತ್ -ಜಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೇರಿದೆ.

ಇಂದು ಶುಕ್ರವಾರ  ಸಂಜೆ 4:30ರ ಸುಮಾರಿನಲ್ಲಿ ಕಾರು ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದ್ದು, 6 ಜನರು ಸಾವನ್ನಪ್ಪಿದ್ದಾರೆ.

ಮೂಡಲಗಿ ತಾಲೂಕು ಗುರ್ಲಾಪುರದಿಂದ ಹಾರೂಗೇರಿ ಪಟ್ಟಣಕ್ಕೆ ಹೊರಟಿದ್ದ ಶಿಫ್ಟ್ ಕಾರು ಹಾಗೂ ಹೋಂಡಾ ಶೈನ್ ಬೈಕ್ ಹಾಗೂ ಎಕ್ಸಲ್ ಸೂಪರ್ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಫ್ಟ್ ಕಾರ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಬೈಕ್ ಗಳಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಮರಕ್ಕೆ ಗುದ್ದಿದೆ. ಪರಿಣಾಮವಾಗಿ ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದರೆ , ಓವ೯  ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Emergency Service

ಮೃತರನ್ನು ಗುರ್ಲಾಪುರ ಗ್ರಾಮದ ಲಕ್ಷ್ಮಿ ರಾಮಪ್ಪ ಮರಾಠೆ(19) ಮಲ್ಲಿಕಾರ್ಜುನ ರಾಮಪ್ಪ ಮರಾಠೆ(16) ಆಕಾಶ ರಾಮಪ್ಪ ಮರಾಠೆ(14) ಸಿಫ್ಟ್ ಕಾರಿನ ಚಾಲಕ ಡ್ರೈವರ್ ಏಕನಾಥ ಭೀಮಪ್ಪ ಪಡತರೆ(22)  ಮುಗಳಖೋಡ ಪಟ್ಟಣದ ಎಕ್ಸೆಲ್ ಸೂಪರ್ ಬೈಕ್ ಸವಾರ ನಾಗಪ್ಪ ಲಕ್ಷ್ಮಣ ಯಡವಣ್ಣವರ(48) ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಶಿಕ್ಷಕ  ಹಣಮಂತ ಮಾಳಪ್ಪ ಮಳ್ಯಾಗೋಳ(42) ಬಾಲನಂದ ಪರಸಪ್ಪ ಮಾಳಗಿ(37) ಎಂದು ಗುರುತಿಸಲಾಗಿದೆ.

ಗೋಕಾಕದ ಪಟ್ಟಣದ ನಿವಾಸಿ ಹೋಂಡಾ ಶೈನ್ ಬೈಕ್ ಸವಾರ ಬಾಲಾನಂದ ಪರಪ್ಪ ಮಾಳಗೆ ಹಾರೂಗೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾರೂಗೇರಿ ಸಿಪಿಐ ರವಿಚಂದ್ರನ್ ಬಡಪಕಿರಪ್ಪನವರ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ, ಹಾರೂಗೇರಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಎಎಸ್ಐ ಎಸ್.ಎಲ್.ಬಾಡಕರ, ಅಶೋಕ ಶಾಂಡಗೆ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bottom Add3
Bottom Ad 2