ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಹುಕ್ಕೇರಿ ಹಿರೇಮಠದ ಸಭಾಭವನಲ್ಲಿ ಗುರುವಾರ ಆಯೋಜಿಸಿದ ವಿರೇಶ ಬಸಯ್ಯ ಹಿರೇಮಠ ರಚಿಸಿದ, ತಾಯವ್ವಾ ಧ್ವನಿಸುರುಳಿಯನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು.
ಆರ್ಶೀವಚನಗಳನಾಡಿದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಅಮ್ಮಾ ಅತ್ಯಂತ ಸುಂದರವಾದ ಗಟ್ಟಿಯಾದ ಶಿಲ್ಪಿ ಎಂತಹ ಒರಟು ಮಕ್ಕಳನ್ನು ತಿದ್ದಿತೀಡಿ ರೂಪ ಕೊಟ್ಟು ಸಮಾಜದಲ್ಲಿ ಸುಂದರ ಶಿಲ್ಪಿ ಮಾಡುವ ಚಾಕಚಕ್ಯತೆ ಅಮ್ಮನಿಗಿದೆ ಎಂದರು.
ತಾಯವ್ವಾ ಹೆಸರಿನಲ್ಲಿ ಸಂಗೀತ ರಚಿಸಿದ ವಿರೇಶ ಬಸಯ್ಯ ಹಿರೇಮಠ ಅವರ ಕಾರ್ಯ ಶ್ಲಾಘನೀಯ, ಮಕ್ಕಳಿಗಾಗಿ ತಾಯಿ ಸಕಲವನ್ನು ಧಾರೆ ಎರೆವಳು ತಾಯಿ ಹೆಸರಿನಲ್ಲಿ ಯಾವುದೇ ಮಹತ್ವ ಕಾರ್ಯಮಾಡಿದರು ಫಲ ಖಚಿತ. ಅದಕ್ಕೆ, ಸಾಕ್ಷಿ ಡಾ.ರವಿ ಪಾಟೀಲ ಅವರು, ತಾಯಿಯ ಹೆಸರಿನಲ್ಲಿ ಆಸ್ಪತ್ರೆ ನಿರ್ಮಿಸಿ ಸಮಾಜ ಸೇವೆ ಮಾಡುತ್ತಿರುವುದು ಒಳ್ಳೆಯ ಕೆಲಸ, ತಾಯಿ ಹೆಸರಿನಲ್ಲಿ ಜಗತ್ತನ್ನು ಗೆಲ್ಲುವ ಶಕ್ತಿ ಇದೆ ಎಂದು ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಿಜಕ್ಕೂ ತಾಯಿಯ ನಿಸ್ವಾರ್ಥ ಸೇವೆ ಬಲು ದೊಡ್ಡದು, ಮಗುವಿನ ತೊದಲ ನುಡಿಯಲ್ಲೂ ಅಮ್ಮ ಎನ್ನುತ್ತದೆ, ಅಮ್ಮಾ ಒಬ್ಬ ಶಿಕ್ಷಕಿಯಾಗಿ, ಸ್ನೇಹಿತೆಯಾಗಿ ಮಕ್ಕಳಿಗೆ ಧೈರ್ಯ ತುಂಬುತ್ತಾಳೆ ಎಂದು ಅಮ್ಮನ ತ್ಯಾಗದ ಬಗ್ಗೆ ತಿಳಿಸಿದರು.
ಡಾ.ರವಿ ಪಾಟೀಲ ಮಾತನಾಡಿ, ನನ್ನ ಈ ಸಾಧನೆಗೆ ತಾಯಿಯೇ ಸ್ಪೂರ್ತಿ, ತಾಯಿಯ ಆರ್ಶೀವಾದ ಅವಳ ಹೆಸರಿನಿಂದ ವೈದ್ಯರಾಗಿ ಸಮಾಜ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ.
ಯುವಕರು, ಉದ್ಯೋಗಸ್ಥರರು ತಾಯಿಯನ್ನು ಪೂಜಿಸಿ, ಜಪಿಸಬೇಕು. ಯಾವುದೇ ಒಳ್ಳೆಯ ಕಾರ್ಯನೆರವೇರಲು ತಾಯಿಯ ಆರ್ಶೀವಾದಿಂದ ಮಾತ್ರ ಸಾಧ್ಯ. ಅವಳ ಹೆಸರಿನಲ್ಲಿ ಅಪಾರ ಶಕ್ತಿ ಅಡಗಿದೆ, ತಾಯಿಯಿಂದಲೇ ಜಗತ್ತಿಗೆ ಬೆಳಕು ಎಂದರು.
ನಿವೃತ್ತ ಪ್ರಾಚಾರ್ಯ ಸುಮಂಗಲ ಸಿಂತ್ರಿ ಮಾತನಾಡಿ, ವೇದಕಾಲದಿಂದಲೂ ತಾಯಿಗೆ ಮಹತ್ವ ಗೌರವ ನೀಡುತಾ ಬಂದಿದ್ದೆವೆ, ತಾಯಿಯ ವರ್ಣನೆಗೆ ಪದಗಳೆ ಸಾಲದು, ಮಗನ ಶ್ರೇಯೋಬಿವೃದಿಗಾಗಿ ತಾಯಿ ತನ್ನ ಜೀವನವನ್ನು ನಸಿಸುವವಳು. ಮಗನ ಖುಷಿಯಲ್ಲಿ ತಾಯಿ ತನ್ನೆಲ್ಲ ಕಷ್ಟಗಳನ್ನು ಮರೆಳವು ಅದಕ್ಕಾಗಿ ಯುವಕರು ದೊಡ್ಡ ವ್ಯಕ್ತಿಗಳಾದ ಮೇಲೆ ತಾಯಿಯನ್ನು ಪ್ರೀತಿಯಿಂದ ಕಾಣುವುದೇ ಶ್ರೇಷ್ಟ ಕಾಯಕ ಎಂದರು.
ಈ ಸಂದರ್ಭದಲ್ಲಿ ನಿರ್ದೇಶನ ಗಗನದೀಪ ಕುರಳೆ, ಗಾಯನ ಮತ್ತು ಸಂಗೀತ ಸಂಜೀವ ಮಲಾದೂರೆ, ಶಂಕರ ಜಯಂತ್ರಿ, ಆಡಿಯೋ ಮುದ್ರಣ ಕೆ.ಬಿ ಸ್ಟೂಡಿಯೋ, ಆನಂದ ಭಾತಕಂಡೆ, ವೀರಪಾಕ್ಷಯ್ಯ ನೀರಲಗಿಮಠ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ