*ಜಾತಿ ಗಣತಿ ವಿಶೇಷ ಸದನದಲ್ಲಿ ಚರ್ಚೆಯಾಗಲಿ: ಎಂಎಲ್ಸಿ ರವಿಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾತಿ ಗಣತಿಯ ಕುರಿತು ಚರ್ಚೆ ಪ್ರಾರಂಭ ಆಗುತ್ತಿದೆ. ಅಂಕಿ ಅಂಶಗಳನ್ನು ಮಂತ್ರಿಗಳಿಗೆ ಕೊಡಲಾಗುತ್ತದೆ. ನಂತರ ಇದನ್ನು ಜಾರಿಗೊಳಿಸುವ ಕುರಿತು ಯೋಚನೆ ಮಾಡ್ತಿವಿ ಎಂದು ಸಿಎಂ ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಈ ಜಾತಿ ಗಣತಿಯ ಬಗ್ಗೆ ಅಸಮಾಧಾನ ಇದೆ. ಹಾಗಾಗಿ ಸರ್ಕಾರ ಒಂದು ವಾರ ವಿಶೇಷ ಸದನ ಕರೆಯಲಿ. ಈ ಕುರಿತು ಚರ್ಚೆ ಮಾಡೋಣ ಎಂದು ಎಂ ಎಲ್ ಸಿ ಎನ್ ರವಿಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2013 ರಲ್ಲಿ ಈ ಜಾತಿಗಣತಿ ಆಗಿದೆ, ಲಕ್ಷಾಂತರ ಮನೆಗಳಿಗೆ ಹೋಗಿಲ್ಲ, ನನ್ನ ಮನೆಗೂ ಬಂದಿಲ್ಲ. ಇದು ಎಷ್ಟರಮಟ್ಟಿಗೆ ವೈಜ್ಞಾನಿಕ ಸರ್ವೆ ಅಂತ ಪರಿಗಣಿಸೋದು. ಲಕ್ಷಾಂತರ ಸಣ್ಣ ಸಣ್ಣ ಕಮ್ಯುನಿಟಿಗಳು ಅನ್ಯಾಯಕ್ಕೊಳಗಾಗಿವೆ. ಶೈಕ್ಷಣಿಕ, ಆರ್ಥಿಕವಾಗಿ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾದ ವಿರುದ್ಧ ಎರಡನೇ ಹಂತದ ಜನಾಕ್ರೋಶ ಯಾತ್ರೆ ಬೆಳಗಾವಿಯಿಂದ ಪ್ರಾರಂಭ ಆಗುತ್ತೆ. ಇದೇ 16 ರಂದು ವಿಜಯೇಂದ್ರ, ಆರ್ ಅಶೋಕ್, ಚಲುವಾದಿ ನಾರಾಯಣ ಅವರ ನೇತ್ರತ್ವದಲ್ಲಿ ನಡೆಯಲಿದೆ ಎಂದರು.
16 ರಂದು ಬೆಳಗ್ಗೆ 10:30 ಹಾಗೂ ನಂತರ ಹುಬ್ಬಳ್ಳಿ ನಂತರ ಬಾಗಲಕೋಟೆ, ವಿಜಯಪುರದಲ್ಲಿ ಯಾತ್ರೆ ಆರಂಭವಾಗಲಿದೆ. ನಿನ್ನೆ ನಾನು ನಮ್ಮ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರ ಜೊತೆಗೆ ಸಭೆ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಬೆಲೆ ಏರಿಕೆಯ ದಾಳಿ ಆಗುತ್ತಿದೆ. ಮೂರು ಮೂರು ಬಾರಿ ಹಾಲಿದ ದರ ಏರಿಕೆ ಮಾಡಲಾಗಿದೆ. ರೈತರಿಗೆ ಕೊಡುತ್ತೆವೆ ಎಂದು ಹೇಳಿ ರೈತರಿಗೆ ಒಂದು ರೂ. ಕೊಟ್ಟಿಲ್ಲ. ನಮ್ಮ ರಾಜ್ಯದ ಅನುಭವಿ ರಾಜಕಾರಣ ನಾನು ದೇವರಾಜ್ ಅರಸ್ ಅಂತ ಹೇಳುವ ಸಿದ್ದರಾಮಯ್ಯ 9 ರೂ. ಹಾಲಿನ ದರವನ್ನು ಹೆಚ್ಚಳ ಮಾಡಿದ್ರು, ಇದರಿಂದ ಹಾಲಿನ ಉಪ ಉತ್ಪನ್ನಗಳ ಬೆಲೆಯೂ ಸಹ ಜಾಸ್ತಿಯಾಗಿದೆ ಎಂದರು.
ಕರ್ನಾಟಕದಲ್ಲಿ ಕಸದ ಮೇಲೂ ಸಹ ಟ್ಯಾಕ್ಸ್ ಹಾಕಲಾಗುತ್ತಿದೆ. ನೀರಿನ ಮೇಲೂ ಸಹ ಟ್ಯಾಕ್ಸ್ ಹಾಕಲಾಗುತ್ತಿದೆ. ತೆರಿಗೆ ಹಾಗೂ ಬೆಲೆ ಏರಿಕೆಯ ದಾಳಿ ಕರ್ನಾಟಕದಲ್ಲಿ ನಡೆಯುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಮನೆಯ ತೆರಿಗೆಯ ಲೂಟಿ ಆಗ್ತಿದೆ. ಆಲ್ಕೊಹಾಲ್ 60 ಎಮ್ ಎಲ್ ಗೆ ಅದರ ಬೆಲೆ ಡಬಲ್ ಆಗಿದೆ. 42 ಸಾವಿರ ಕೋಟಿ ರೂ ತೆರಿಗೆ ಸಂಗ್ರಹ ಮಾಡುವ ಟಾರ್ಗೆಟ್ ಇಡಲಾಗಿದೆ. ಬಸ್ ಪ್ರಯಾಣ, ಮುದ್ರಾಂಕ ಶುಲ್ಕ ಸೇರಿದಂತೆ 48 ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದಾರೆ. 20ರೂ ಸ್ಟಾಂಪ್ ಡ್ಯೂಟಿ 100 ರೂಗೆ ಹೆಚ್ಚಳ ಮಾಡಿದ್ದಾರೆ. ಇದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. 11400 ಕೋಟಿ ರೂ ಎಸ್ ಸಿ ಎಸ್ ಟಿ ಹಣವನ್ನು ತೆಗೆಯಲಾಗಿದೆ. ಹತ್ರತ್ರ 38 ಸಾವಿರ ಕೋಟಿ ರೂಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.
ಅವರ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. ಎಸ್ ಸಿ ಎಸ್ ಟಿ ಗಳ ಹಣವನ್ನು ಲೂಟಿ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ರಾಜ್ಯದಲ್ಲಿ ನಡೆಯುತ್ತಿದೆ. ವಿದೇಶಕ್ಕೆ ಓದಲು ಹೋಗುವ ವಿದ್ಯಾರ್ಥಿಗಳಿಗೆ 30 ಲಕ್ಷ ಹಣ ಕೊಡಲಾಗುತ್ತಿದೆ ಎಂದರು
ಹಿಂದೂಗಳಲ್ಲಿ ಬಡ ವಿದ್ಯಾರ್ಥಿಗಳಿಲ್ವಾ? ಮಸೀದಿಗಳಿಗೆ ಮದರಸಾಗಳಿಗೆ ಹಣವನ್ನು ಕೊಡಲಾಗುತ್ತಿದೆ. ಅಲ್ಲಾ ಹು ಅಕ್ಬರ್ ಎಂದು ಪೂಜೆ ಮಾಡುವ ಇಮಾಮಿಗಳಿಗೆ 6 ಸಾವಿರ ಕೊಡಲಾಗುತ್ತಿದೆ. ನಮ್ಮ ಪೂಜಾರಿಗಳಿಗೆ ಒಂದು ರೂ ಕೊಡ್ತಿಲ್ಲ. ಮುಸ್ಲಿಂ ನವದಂಪತಿಗಳಿಗೆ 50 ಸಾವಿರ ರೂ ಕೊಡಲಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಟಿಕರಣ ಅಸಹ್ಯ ಹುಟ್ಟಿಸುತ್ತಿದೆ ಎಂದರು.