Kannada NewsKarnataka NewsLatest

*ಜಾತಿಗಣತಿ ವರದಿಯ ಮೂಲ ಪ್ರತಿಯೇ ನಾಪತ್ತೆ; ಸರ್ಕಾರಕ್ಕೆ ಪತ್ರ ಬರೆದ ಆಯೋಗದ ಅಧ್ಯಕ್ಷ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಾತಿಗಣತಿ ವರದಿ ವಿಚರವಾಗಿ ರಾಜ್ಯ ಸರ್ಕಾರದ ನಡುವೆಯೇಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು ಇದೀಗ ಜಾತಿಗಣತಿ ವರದಿ ಮತ್ತೊಂದು ವಿವಾದಕ್ಕೆ ಸಿಲುಕಿದಂತಿದೆ.

ಜಾತಿಗಣತಿ ವರದಿಯ ಮೂಲ ಪ್ರತಿಯೇ ಕಾಣಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಜಾತಿಗಣತಿ ವರದಿ ಮೂಲ ಪ್ರತಿ ಅಲಭ್ಯವಾಗಿರುವುದಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

Home add -Advt

ಜಾತಿಗಣತಿಗೆ ಸಂಬಂಧಿಸಿದ ಮೂಲ ವರದಿಯ ಪ್ರತಿಯನ್ನು ಸೀಲ್ಡ್ ಬಾಕ್ಸ್ ನಲ್ಲಿ ಇಡಲಾಗಿತ್ತು. ಆದರೆ ಈಗ ಸೀಲ್ಡ್ ಬಾಕ್ಸ್ ನಲ್ಲಿಟ್ಟಿದ್ದ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button