Kannada NewsKarnataka NewsLatest

ಸಮಾಜಘಾತುಕ ಚಟುವಟಿಕೆ; ಬೆಳಗಾವಿಯಿಂದ ಇಬ್ಬರು ಗಡಿಪಾರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮ, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಇಬ್ಬರನ್ನು ಗಡಿಪಾರು ಮಾಡಿ ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮಹಾದ್ವಾರ ರಸ್ತೆಯ ಸಂಭಾಜಿಗಲ್ಲಿಯ ಪ್ರಜ್ವಲ್ @ ಜ್ಯೋತಿಬಾ ಶಂಕರ ಕಿತವಾಡಕರ ಹಾಗೂ ಹೊನಗಾ ಭೈರವನಾಥ ಗಲ್ಲಿ ನಿವಾಸಿ ಹಾಸಿಂ ಇಬ್ರಾಹಿಂ ಘೋರಿ @ ಪಠಾಣ ಗಡಿಪಾರಾದವರು.

Home add -Advt

ಇವರಿಬ್ಬರೂ ನಗರದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜಾಟ ಹಾಗೀ ಇತರ ಸಮಾಜಘತುಕ ಚಟುವಟಿಕೆಗಳಲ್ಲಿ ತೊಡಗಿದ್ದು ಹಲವು ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾರ್ಕೆಟ್ ಹಾಗೂ ಕಾಕತಿ ಪೊಲೀಸ್ ಠಾಣಾಧಿಕಾರಿಗಳ ಮಾಹಿತಿ ಆಧರಿಸಿ ಬೆಳಗಾವಿ ಉಪ ಪೊಲೀಸ್ ಆಯುಕ್ತ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶೇಖರ ಎಚ್.ಟಿ. ಅವರು ಇಬ್ಬರನ್ನೂ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ನಿಗಮ ಸ್ಥಾಪನೆಗಾಗಿ ಸರಕಾರಕ್ಕೆ ಅಭಿನಂದಿಸಿದ ಸಮುದಾಯಗಳು

https://pragati.taskdun.com/the-communities-congratulated-the-government-for-setting-up-the-corporation/

ವಿದ್ಯಾರ್ಥಿನಿ ಮೊಬೈಲ್ ಗೆ ಕಿಡಿಗೇಡಿ ಮೆಸೇಜ್; ಶಿಕ್ಷಕ ಅಮಾನತು

https://pragati.taskdun.com/mischievous-message-to-a-students-mobile-phone-teacher-suspended/

ಟರ್ಕಿಯಲ್ಲಿ ಭಾರತೀಯ ಸೇನಾ ಕಾರ್ಯಕ್ಕೆ ಭರಪೂರ ಪ್ರಶಂಸೆ

https://pragati.taskdun.com/indian-armys-performance-in-turkey-is-much-appreciated/

 

Related Articles

Back to top button