Kannada NewsKarnataka News

ಆನಂದ ಚೋಪ್ರಾ ಕುಟುಂಬಕ್ಕೆ ಸಾಂತ್ವನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನಾಯಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಆನಂದ ಚೋಪ್ರಾ ಅವರ ನಿಧನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಪರವಾಗಿ ಚನ್ನರಾಜ ಹಟ್ಟಿಹೊಳಿ ಮತ್ತು ಮೃಣಾಲ ಹೆಬ್ಬಾಳಕರ ಮೃತರ ನಿವಾಸಕ್ಕೆ ತೆರಳಿ ಸಂತಾಪವನ್ನು ವ್ಯಕ್ತಪಡಿಸಿ ಅವರ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿ ಧೈರ್ಯವನ್ನು ತುಂಬಿದ್ದಾರೆ.
ಸೋಮವಾರ ಸವದತ್ತಿಗೆ ತೆರಳಿದ ಅವರು, ಕುಟುಂಬಸ್ಥರನ್ು ಭೇಟಿ ಮಾಡಿ ಸಾಂತ್ವನದ ನುಡಿಗಳನ್ನಾಡಿದರು. ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನಲ್ಲಿರುವುದರಿಂದ ಅವರ ಪರವಾಗಿ ಸಹೋದರ ಚನ್ನರಾಜ ಮತ್ತು ಪುತ್ರ ಮೃಣಾಲ ಭೇಟಿ ನೀಡಿದರು.
 ಸಂದರ್ಭದಲ್ಲಿ ಮಹಾಂತೇಶ ಮತ್ತಿಕೊಪ್ಪ, ಮಹಾರಾಜಗೌಡ ಪಾಟೀಲ, ಉಮೇಶ ಗೌಡರ, ಯರಗಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟೋಪೋಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್, ಶ್ರೀಶೈಲ್ ಮುತಗೊಂಡ, ಬಸವರಾಜ ಪ್ರಭುನವರ, ಆಸಿಫ್ ಬಾಗೋಜಿಕೊಪ್ಪ, ಬಸನಗೌಡ ಪಾಟೀಲ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Home add -Advt

Related Articles

Back to top button