Latest

ವಿ.ಸೋಮಣ್ಣ ಬಿಜೆಪಿಯಲ್ಲೇ ಇರಬೇಕು, ಸಿಎಂ ಆಗ್ಬೇಕು; ಅಭಿಮಾನಿಗಳ ಮನವಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಸತಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ಮಧ್ಯೆ ಇದೀಗ ಸೋಮಣ್ಣ ಅಭಿಮಾನಿಗಳು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.

ಮೈಸೂರಿನಲ್ಲಿ ಸಚಿವ ಸೋಮಣ್ಣ ಅಭಿಮಾನಿಗಳು ಸಭೆ ನಡೆಸಿದ್ದು, ವಿ.ಸೋಮಣ್ಣ ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು. ಕೇಂದ್ರ ನಾಯಕರು ಸೋಮಣ್ನ ಮನವೊಲಿಕೆ ಮಾಡಬೇಕು. ಪಕ್ಷದ ಕೋರ್ ಕಮಿಟಿಯಲ್ಲಿ ಅವರಿಗೆ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Home add -Advt

ಸೋಮಣ್ಣ ಅವರನ್ನು ಬಿಜೆಪಿಯಲ್ಲಿ ಇರುವಂತೆ ಬಿಜೆಪಿ ನಾಯಕರು ಯತ್ನಿಸಬೇಕು. ಸೋಮಣ್ಣ ಸಿಎಂ ಆಗಬೇಕು ಎಂದು ಅಭಿಮಾನಿಗಳು ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ. ಸೋಮಣ್ಣ ಎಲ್ಲಿ ಇರುತ್ತಾರೋ ನಾವೆಲ್ಲ ಅಲ್ಲಿ ಇರ್ತೇವೆ ಎಂದಿದ್ದಾರೆ.

Related Articles

Back to top button