Belagavi NewsBelgaum NewsKannada NewsKarnataka News

ಬೆಳಗಾವಿ: 3 ದಿನ ನೀರು ಸರಬರಾಜು ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್‌ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಸೋರಿಕೆಯಾಗಿದ್ದು ಚನ್ನಮ್ಮಾ ವೃತ್ತದ ಹತ್ತಿರ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ.

ಇದರಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ.

Home add -Advt

ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್ ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಚನ್ನಮ್ಮಾ ವೃತ್ತದ ಹತ್ತಿರ ಸೊರಿಕೆಯಾಗಿದ್ದು ದಿನಾಂಕ: ೧೮.೧೦.೨೦೨೩ ರಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ.

ಸ್ಮಾರ್ಟ್ ಸಿಟಿ ರೊಡ್ ಮಾಡುವಾಗ ಈ ಮಾರ್ಗದ ವಾಲ್ವ್ ಮತ್ತು ಪೈಪ್ ಕಾಂಕ್ರಿಟ್ ರೋಡ್ ಕೆಳಗಡೆ ಮುಚ್ಚಿರುವುದರಿಂದ ಇದನ್ನು ಹುಡುಕುವ ಕಾರ್ಯವು ಪ್ರಗತಿಯಲ್ಲಿದ್ದು ದುರಸ್ಥಿ ಕಾರ್ಯವು ತಡವಾಗುವ ಕಾರಣ, ಪ್ರಸ್ತುತ ಇರುವ ನೀರು ಸರಬರಾಜು ಷೆಡ್ಯೂಲ್ ಮುಂದಿನ ಮೂರು ದಿನಗಳಿಗೆ ಮುಂದುವರಿಯುತ್ತದೆ.

ಅಂದರೆ ದಿನಾಂಕ: ೧೯/೧೦/೨೦೨೩ ರಿಂದ ೨೧/೧೦/೨೦೨೩ ರವರೆಗೆ ಮೂರು ದಿವಸ ಬೆಳಗಾವಿ ನಗರದ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ (ಸರದಿಯಲ್ಲಿ) ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ಉತ್ತರದ ಪ್ರದೇಶಗಳು: ಶಿವಾಜಿ ನಗರ, ಸುಭಾಶ ನಗರ, ವೀರಭದ್ರ ನಗರ, ಆಯೋದ್ಯ ನಗರ, ಅಸದ್ ಖಾನ್ ಸೊಸೈಟಿ, ಅಹ್ಮದ್ ನಗರ, ಅಶೋಕ ನಗರ (ಭಾಗಶ:), ಜೈಲ ಕಾಲೋನಿ, ಪಂಜಿ ಬಾಬಾ.

Related Articles

Back to top button