Kannada NewsKarnataka NewsLatest

*ಕ್ಯಾಮೆರಾ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ವಾಷಿಂಗ್ ಪೌಡರ್*

ಪ್ರಗತಿವಾಹಿನಿ ಸುದ್ದಿ: ಆನ್‌ಲೈನ್ ಮೂಲಕ 69 ಸಾವಿರ ನೀಡಿ ಕ್ಯಾಮರಾ ಆರ್ಡರ್ ಮಾಡಿದ ಉದ್ಯಮಿಗೆ, ಡೆಲಿವರಿಯಲ್ಲಿ ಎರಡು ಪ್ಯಾಕೆಟ್ ವಾಷಿಂಗ್ ಪೌಡರ್ ತಲುಪಿದ ಪ್ರಕರಣ ಬೆಳಕಿಗೆ ಬಂದಿದೆ.

ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲೈಡ್, ಆತ್ಮೀಯ ಸ್ನೇಹಿತನಿಗೆ ಉಡುಗೊರೆಯಾಗಿ ನೀಡಲು ಕ್ಯಾಮರಾವನ್ನು ಅಮೆಜಾನ್ ಮೂಲಕ 60,990 ರೂ ನೀಡಿ ಬುಕ್ ಮಾಡಿದ್ದರು. ನಿಗದಿತ ದಿನಾಂಕದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ವಿಳಾಸಕ್ಕೆ ಕೊರಿಯರ್ ತಲುಪಿತ್ತು. ಆದರೆ ಪ್ಯಾಕೇಜ್ ತೆರೆಯುತ್ತಿದ್ದಂತೆಯೇ ಕ್ಯಾಮರಾ ಬದಲು ವಾಷಿಂಗ್ ಪೌಡರ್ ಬಂದಿದೆ.

ಅಲೈಡ್ ಹೇಳುವಂತೆ, ದುಬೈಯಲ್ಲಿ ತಾವು ಹಲವು ಬಾರಿ ಆನ್‌ಲೈನ್ ಮೂಲಕ ಖರೀದಿ ನಡೆಸಿದ್ದರೂ ಇಂತಹ ಅನುಭವ ಎದುರಾಗಿರಲಿಲ್ಲ. ಎರಡು ದಿನಗಳ ಹಿಂದೆ ಮಾತ್ರ ಈ ಕ್ಯಾಮರಾ ಆರ್ಡರ್ ಮಾಡಿದ್ದು ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಗೆ ನೀಡಲು ಯೋಜಿಸಿದ್ದರು.

ಪಾರ್ಸೆಲ್ ತೆರೆಯುವ ಸಂಪೂರ್ಣ ದೃಶ್ಯವನ್ನು ನಾನು ವಿಡಿಯೋ ಮಾಡಿದ್ದೇನೆ. ಸಾಕ್ಷಿಗಳೊಂದಿಗೆ ದೂರು ನೀಡಿದ್ದರೂ ಸಮರ್ಪಕ ಸ್ಪಂದನೆ ದೊರಕಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಕಂಪನಿಗೆ ದೂರು ಸಲ್ಲಿಸಲಾಗಿದ್ದು ವಿಷಯದ ಪರಿಶೀಲನೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 

Related Articles

Back to top button