Latest

ಹೊಸ ವಿವಾದಕ್ಕೆ ಕಾರಣವಾಯ್ತು ಹಂಪಿಯಲ್ಲಿ ನಡೆದ ಪ್ರೀ ವೆಡ್ಡಿಂಗ್ ಫೋಟೋಶೂಟ್

ಪ್ರಗತಿವಾಹಿನಿ ಸುದ್ದಿ; ಹಂಪಿ: ಮದುವೆಗೂ ಮುನ್ನ ನಡೆಸುವ ಪ್ರೀ ವೆಡ್ದಿಂಗ್ ಫೋಟೋಶೂಟ್ ಇತ್ತೀಚೆಗೆ ಟ್ರೆಂಡ್ ಆಗಿ ಪರಿಣಮಿಸಿದೆ. ಇದೀಗ ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿ ನಡೆದ ಪ್ರೀ ವೆಡ್ಡಿಂಗ್ ಫೋಟೋಶೂಟ್ ಒಂದು ವಿವಾದಕ್ಕೆ ಕಾರಣವಾಗಿದೆ.

ಹಂಪಿಯ ನಿರ್ಬಂಧಿತ ಪ್ರದೇಶಗಳಲ್ಲಿ ಹೊಸ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿದೆ. ಅನುಮತಿಯಿಲ್ಲದಿದ್ದರೂ ಈ ಪ್ರದೇಶಗಳಲ್ಲಿ ಫೋಟೋಶೂಟ್ ಮಾಡಿದ್ದಾರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

Home add -Advt

ಹಂಪಿಯ ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪಕ್ಕೆ ನಿರ್ಬಂಧವಿಧಿಸಿದ್ದರೂ ಕೂಡ ಇಲ್ಲಿ ಫೋಟೋಶೂಟ್ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

Related Articles

Back to top button