Latest

ಇದು ಚುನಾವಣೆ ಗಿಮಿಕ್ ಅಲ್ಲ; ಖಡಕ್ ಉತ್ತರ ಕೊಟ್ಟ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಗೆಲುವು ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರದವರು ಹಲವು ವರ್ಷಗಳಿಂದ ಗಡಿ ವಿವಾದ ಮಾಡುತ್ತಿದ್ದಾರೆ. ನೆಲ, ಜಲ, ಭಾಷೆ, ಗಡಿ ರಕ್ಷಣೆಯಲ್ಲಿ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆಗೂ ಸರ್ಕಾರ ಸಿದ್ಧವಾಗಿದೆ ಎಂದರು.

Home add -Advt

ಚುನಾವಣೆ ದೃಷ್ಟಿಯಿಂದ ಗಡಿ ವಿವಾದ ಎಬ್ಬಿಸಿಲ್ಲ. ಇದು ಚುನಾವಣೆ ಗಿಮಿಕ್ ಎಂಬ ಆರೋಪದಲ್ಲಿ ಹುರುಳಿಲ್ಲ. ಜನರ ರಕ್ಷಣೆ ಸರ್ಕಾರದ ಜವಾಬ್ದಾರಿ. ಮಹಾರಾಷ್ಟ್ರ, ತೆಲಂಗಾಣ ಎಲ್ಲಾ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

 

100 ವಾಹನಗಳಲ್ಲಿ ಕರವೇ ಬೆಳಗಾವಿಗೆ; 1000 ಕನ್ನಡ ಬಾವುಟ ಹಾರಾಟ

https://pragati.taskdun.com/belagavi1000-kannada-flagkaravavenarayanagowda/

Related Articles

Back to top button