Belagavi NewsBelgaum NewsKannada NewsKarnataka NewsNational

*ಭಾರಿ ಮಳೆಯ ಮುನ್ಸೂಚನೆ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಮುಂದಿನ 48 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರಾಜ್ಯದ 14 ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Home add -Advt

ಕಳೆದ 24 ಗಂಟೆಯಲ್ಲಿ ಕೊಪ್ಪಳದ ತಾವರಗೇರೆಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಗಂಗಾವತಿಯಲ್ಲಿ 7, ಧರ್ಮಸ್ಥಳ, ರೋಣದಲ್ಲಿ ತಲಾ 5, ಬೆಳ್ತಂಗಡಿ, ಬಾದಮಿ, ತ್ಯಾಗರ್ತಿಯಲ್ಲಿ ತಲಾ 4, ಪುತ್ತೂರು, ಮೂರ್ನಾಡು, ಅಜ್ಜಂಪುರದಲ್ಲಿ ತಲಾ 3, ಕುಡುತಿನಿ, ಬನವಾಸಿ, ಮಾಣಿ, ಪಣಂಬೂರು, ಸಿದ್ದಾಪುರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆ.21ರ ವರೆಗೆ ಸಾಧಾರಣ ಮಳೆಯಾಗುತ್ತದೆ. ಕೆಲವು ಕಡೆ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Related Articles

Back to top button