Latest

ಬಿಜೆಪಿ: ಬೆಳಗಾವಿಗೆ ಸುರೇಶ ಅಂಗಡಿ, ಚಿಕ್ಕೋಡಿಗೆ ಜೊಲ್ಲೆ?

ಪ್ರಗತಿವಾಹಿನಿ ಸುದ್ದಿ, ನವದೆಹಲಿ

Related Articles

ಭಾರತೀಯ ಜನತಾಪಾರ್ಟಿ ತನ್ನ 24 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ರಾತ್ರಿ ಅಂತಿಮಗೊಳಿಸಿದೆ. ಆದರೆ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. 

ಬೆಳಗಾವಿಗೆ ಹಾಲಿ ಸಂಸದ ಸುರೇಶ ಅಂಗಡಿ ಹೆಸರು ಅಂತಿಮಗೊಳಿಸಲಾಗಿದ್ದು, ಚಿಕ್ಕೋಡಿಗೆ ಅಣ್ಣಾ ಸಾಹೇಬ ಜೊಲ್ಲೆ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  ರಮೇಶ ಕತ್ತಿ, ಪ್ರಭಾಕರ ಕೋರೆ ಮತ್ತು ಅಣ್ಣಾಸಾಹೇಬ ಜೊಲ್ಲೆ ಮಧ್ಯೆ ಪೈಪೋಟಿ ನಡೆಯುತ್ತಿದ್ದರೂ ಜೊಲ್ಲೆ ಹೆಸರನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಇದೆ.

Home add -Advt

ಹಾಲಿ ಸಂಸದರ ಪೈಕಿ ಶೋಭಾ ಕರಂದ್ಲಾಚೆ ಮತ್ತು ಅನಂತಕುಮಾರ ಹೆಗಡೆ ಹೊರತುಪಡಿಸಿ ಉಳಿದೆಲ್ಲರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಈ ಎರಡು ಕ್ಷೇತ್ರಕ್ಕೆ ಒಮ್ಮತ ಮೂಡಿಸಲು ಯತ್ನಿಸಲಾಗುತ್ತಿದೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಗಳನ್ನೂ ಅಂತಿಮಗೊಳಿಸಲಾಗಿಲ್ಲ. 

 

Related Articles

Back to top button