Kannada NewsKarnataka NewsLatest

*ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಸುಧಾಮನಗರದಲ್ಲಿ ನಡೆದಿದೆ.

ವರ್ಷಿಣಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲೇ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

Home add -Advt

ಬಿಬಿಎ ಜೊತೆಗೆ ಫೋಟೋಗ್ರಫಿ ಓದುತ್ತಿದ್ದ ವರ್ಷಿಣಿ, ಬೆಂಗಳೂರಿನ ಮಾಲ್ ಒಂದರಲ್ಲಿ ನಡೆಯುತ್ತಿದ್ದ ಫೋಟೋ ಶೂಟ್ ಗೆ ಹೋಗುವುದಾಗಿ ಹೇಳಿದ್ದಳು. ಆದರೆ ಪೋಷಕರು ನಿರಾಕರಿಸಿದ್ದರು. ಮಾಲ್ ಗೆ ಹೋಗಿ ಫೊಟೋ ಶೂಟ್ ಮಾಡಿಸುವುದು ಬೇಡ ಎಂದು ಹೇಳಿದ್ದರು.

ಇದರಿಂದ ಮನನೊಂದ ವರ್ಷಿಣಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button