National

*ಮಹಾನ್ ವಿದ್ವಾಂಸ ದಾಜಿ ಪನ್ನಿಕ‌ರ್ ನಿಧನ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಖ್ಯಾತ ಹಾಗೂ ಹಿರಿಯ ಲೇಖಕ, ಮಹಾನ್ ವಿದ್ವಾಂಸರಾದ ದಾಜಿ ಪನ್ನಿಕ‌ರ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. 

92 ವರ್ಷ ವಯಸ್ಸಿನ ಪನ್ನಿಕರ್ ತಮ್ಮ ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.

Home add -Advt

ದಾಜಿ ಪನ್ನಿಕ‌ರ್ ಅವರು ಮರಾಠಿ ಸಾಹಿತ್ಯದ ಹಾಲ್‌ಮಾರ್ಕ್ ಎಂದೇ ಖ್ಯಾತಿ ಗಳಿಸಿದ್ದರು. ಅವರು ರಾಮಾಯಣ, ಮಹಾಭಾರತ ಮತ್ತು ಸಂತ ವಾಂಸ್ಮಯಗಳ ವಿದ್ವಾಂಸರಾಗಿದ್ದರು. 

50ಕ್ಕೂ ಹೆಚ್ಚು ವರ್ಷಗಳ ಕಾಲ ಸಾಮಾಜಿಕ ಉಪನ್ಯಾಸಗಳನ್ನು ಮಾಡಿ ಜನರ ಉನ್ನತೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಗತ್ತಿನಾದ್ಯಂತ ಅವರು 2500ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.

ಮರಾಠಿ ದಿನ ಪತ್ರಿಕೆ ಸಾಮ್ನಾದಲ್ಲಿ ಸತತ 16 ವರ್ಷಗಳ ಕಾಲ ಅಂಕಣ ಬರೆದಿರುವ ಪನ್ನಿಕರ್ ಟೈಮ್ಸ್ ಸೇರಿದಂತೆ ಹಲವು ಪತ್ರಿಕೆಗಳಲ್ಲೂ ಲೇಖನ ಬರೆದಿದ್ದಾರೆ. ಮಹಾಭಾರತ ಏಕ ಸುಧಾಚ ಪ್ರವಾಸ, ಕರ್ಣ ಖರ ಕೂಂ ತೋಟಾ?, ಕಥಾಮೃತಂ, ಕನಿಕಾನೀತಿ, ಶಂಕರಾಚಾರ್ಯರ ಸ್ತೋತ್ರ ಗಂಗೆಯ ಎರಡು ಭಾಗಗಳು, ಅಪರಿಚಿತ ರಾಮಾಯಣದ ಐದು ಭಾಗಗಳು, ಗಾನ ಸರಸ್ವತಿ ಕಿಶೋರಿ ಅಮೋಂಕರ್ – ಆದಿ ಶಕ್ತಿಚ ಧನ್ನೋಡ್ಕರ್ ಸೇರಿದಂತೆ ಅವರು ಪ್ರಸಿದ್ದ ಕೃತಿಗಳನ್ನು ರಚಿಸಿದ್ದಾರೆ.

Related Articles

Back to top button