Latest

ಜ್ಯೋತಿಷ್ಯ ಕೇಳುವ ನೆಪದಲ್ಲಿ ಚಿನ್ನಾಭರಣ ಕದ್ದು ಪರಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜ್ಯೋತಿಷ್ಯ ಕೇಳುವ ನೆಪದಲ್ಲಿ ಮನೆಗೆ ಬಂದ ಕಳ್ಳರ ಗುಂಪೊಂದು ಜ್ಯೋತಿಷಿ ಮನೆಯ ಅಪಾರ ಚಿನ್ನಾಭರಣಗಳನ್ನೇ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ರೈಲ್ವೆ ನಿಲ್ದಾಣ ಬಳಿ ನಡೆದಿದೆ.

ನಾಲ್ವರ ಗುಂಪು ಜ್ಯೋತಿಷ್ಯ ಕೇಳಬೇಕು ಎಂದು ಖ್ಯಾತ ಜ್ಯೋತಿಷಿ ಪ್ರಮೋದ್ ಅವರ ಮನೆಗೆ ಬಂದಿದೆ. ಬಳಿಕ ಪ್ರಮೋದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಕೈಕಾಲು ಕಟ್ಟಿಹಾಕಿ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದೆ.

Home add -Advt

ಕಳ್ಳರು ಜ್ಯೋತಿಷಿ ಮನೆಗೆ ಬಂದು ಚಿನ್ನಾಭರಣ ದೋಚಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ; ಭೂಕುಸಿತದ ಜತೆಗೆ ಮತ್ತೆ ಕಂಪಿಸಿದ ಭೂಮಿ

Related Articles

Back to top button