Latest

ಅಕ್ರಮ ಜಾನುವಾರು  ಸಾಗಾಟ : ಮೂವರ ಬಂಧನ 

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಜಾನುವಾರುಗಳನ್ನು ವಾಹನದ ಇಕ್ಕಾಟ್ಟಾದ ಬಾಡಿಯಲ್ಲಿ ಒಂದಕ್ಕೊಂದು  ತಾಗಿಸಿ ಹಗ್ಗದಿಂದ ಬಿಗಿದು ಕಟ್ಟಿ ಮಲಗಲು ಸಾಧ್ಯವಾಗದ ರೀತಿಯಲ್ಲಿ ತುಂಬಿಕೊಂಡು ಅವುಗಳಿಗೆ ಆಹಾರ, ನೀರು ನೀಡದೇ ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ  ಯಾವುದೇ ಪರವಾನಿಗೆ ಮತ್ತು ಜಾನುವಾರು ಕ್ರಯಪತ್ರವಿಲ್ಲದೆ ಅಕ್ರಮವಾಗಿ ವಾಹನದಲ್ಲಿ   ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ  ಮೇರೆಗೆ ದಾಳಿ ನಡೆಸಲಾಯಿತು.
 ಶಿವಪ್ರಕಾಶ ದೇವರಾಜು ಪೊಲೀಸ್ ಅಧೀಕ್ಷಕರು ಕಾರವಾರ, ಬದರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ,  ರವಿ .ಡಿ.ನಾಯ್ಕ  ಪೊಲೀಸ್ ಉಪಾಧೀಕ್ಷಕರು ಶಿರಸಿ,
 ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು ಶಿರಸಿ  ಮಾರ್ಗದರ್ಶನದಲ್ಲಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
  ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಮೋಹನ ನಾಯ್ಕ, ಮಲ್ಲೇಶಿ ಅಳಗುಂಡಗಿ, ಸುನೀಲ್ ಮೈಲಣ್ಣನವರ, ಹನಮಂತ ಮಾಕಾಪುರರವರನ್ನು ಒಳಗೊಂಡ ತಂಡ  ಇಂದು ಬೆಳಗ್ಗೆ 8:40 ಗಂಟೆ ಸುಮಾರಿಗೆ  ದಾಳಿ ನಡೆಸಿದರು.
ಶಿರಸಿ – ಹುಬ್ಬಳ್ಳಿ ರಸ್ತೆಯ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ನಂ- 5 ಹತ್ತಿರ  ಆರೋಪಿತರಾದ 1) ದಯಾನಂದ ತಂದೆ ರಮೇಶ ಮುಗಳಿಕಟ್ಟಿ ಸಾ/ ಹೆರೂರ ತಾ/ಹಾನಗಲ್ಲ 2) ರವಿ ತಂದೆ ಯಲ್ಲಪ್ಪ ಮುತ್ತಳ್ಳಿ ಸಾ/ಹೆರೂರ  ತಾ /ಹಾನಗಲ್ಲ  3) ಬಸವರಾಜ ತಂದೆ ಚನ್ನಬಸಯ್ಯ ಹಿರೆಮಠ ಸಾ/ಹೆರೂರ ತಾ/ಹಾನಗಲ್ಲ ರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಅಂದಾಜು 8,000/- ರೂ ಮೌಲ್ಯದ 5 ಜರ್ಸಿತಳಿಯ ಗಂಡು ಕರುಗಳು ಮತ್ತು  ಕೃತ್ಯಕ್ಕೆ ಬಳಸಲಾದ  ಅಂದಾಜು 1,00000/- ರೂ ಮೌಲ್ಯದ ಮಹಿಂದ್ರಾ ಮಾಕ್ಸಿಮಾ ವಾಹನವನ್ನು  ಜಪ್ತಿಪಡಿಸಿಕೊಂಡಿದ್ದು ಈ ಬಗ್ಗೆ  ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button