ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದ ಸುಮಾರು 50 ಲಕ್ಷ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಕಾವೇರಿ 5 ನೇ ಹಂತದ ಕಾಮಗಾರಿ ಬಹುತೇಕ ಅಂತಿಮಗೊಂಡಿದೆ. ಈ ಕಾಮಗಾರಿ ಉದ್ಘಾಟನೆಗೆ ಸಿದ್ದವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 23(ಸೋಮವಾರ)ರಂದು ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕಾರ್ಯಕ್ರಮದ ಪಟ್ಟಿ ಹೀಗಿದೆ:
1) ಬೆಂಗಳೂರು ಜಲಮಂಡಳಿ ಕಚೇರಿಯಿಂದ ಹೊರಡಲಿರುವ ಉಪಮುಖ್ಯಮಂತ್ರಿಗಳು ಮೊದಲಿಗೆ ಕೃಷ್ಣಪ್ರಿಯ ಕಲ್ಯಾಣ ಮಂಟಪ,ಕೆಂಗೇರಿಯಲ್ಲಿ ಚಾಲನೆಯಲ್ಲಿರುವ ಬೃಹತ್ ಕೊಳವೆ ಮಾರ್ಗದ ಕಾಮಗಾರಿಯ ಪರಿವೀಕ್ಷಣೆ ನಡೆಸಲಿದ್ದಾರೆ
2) ಕನಕಪುರ ತಾಲೂಕಿನ ಹಾರೋಹಳ್ಳಿಯ 05ನೇ ಹಂತದ ಜಲರೇಚಕ ಯಂತ್ರಗಾರದ ಪರಿವೀಕ್ಷಣೆ
3) ಮಳವಳ್ಳಿ ಸಮೀಪದ ತೊರೆಕಾಡನಹಳ್ಳಿಯ ಕಾವೇರಿ 05ನೇ ಹಂತದ ಜಲಶುದ್ಧೀಕರಣ ಘಟಕ ಮತ್ತು ಜಲರೇಚಕ ಯಂತ್ರಗಾರದ ಪರಿವೀಕ್ಷಣೆ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ