ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಈ ಬಾರಿ ಎರಡು ಹಂತದಲ್ಲಿ ಕೇಂದ್ರ ಬಜೆಟ್ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಜ.31 ರಿಂದ ಫೆ. 11ರವರೆಗೆ ಮೊದಲ ಹಂತದ ಅಧಿವೇಶನ, ಅದರಲ್ಲಿ ಫೆ. 1ರಂದು ವಿತ್ತ ಸಚಿವರಿಂದ ಬಜೆಟ್ ಮಂಡನೆಗೆ ಹಾಗೂ ಉಳಿದಂತೆ ಎರಡನೇ ಹಂತದ ಅಧಿವೇಶನವನ್ನು ಮಾ. 2 ರಿಂದ ಏ.3ರವರೆಗೆ ನಡೆಸಲು ಸಮಿತಿ ಸಲಹೆ ನೀಡಿದೆ. ಎರಡು ಹಂತಗಳ ಬಜೆಟ್ ಅಧಿವೇನದ ನಡುವೆ ಒಂದು ತಿಂಗಳ ಅಂತರ ಕಾಯ್ದುಕೊಳ್ಳಲಾಗುವುದು. ಈ ವೇಳೆ ಸಂಸತ್ ಸಮಿತಿಗಳು ಬಜೆಟ್‌ನಲ್ಲಿ ವಿವಿಧ ಸಚಿವಾಲಯಗಳಿಗೆ ಹಂಚಿಕೆಯಾದ ಅನುದಾನಗಳನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸುತ್ತವೆ ಎಂಬುದು ಸಮಿತಿ ಅಭಿಪ್ರಾಯವಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಸಭೆ ಅನುಮೋದಿಸಿದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿಧೇಯಕದ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೇ ಸಾರ್ವಜನಿಕ ವಲಯದ ಆರು ಉದ್ದಿಮೆಗಳಲ್ಲಿ ಈಕ್ವಿಟಿ ಪಾಲುದಾರಿಕೆಯ ಕಾರ್ಯತಂತ್ರ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಹಣಕಾಸು ವ್ಯವಹಾರಗಳ ಕುರಿತ ಸಚಿವ ಸಮತಿ ಇಂದು ಒಪ್ಪಿಗೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ