Kannada NewsLatestUncategorized

ಖಾನಾಪುರದಲ್ಲಿ ವಿದ್ಯುತ್ ಅವಘಡ: ಹೊತ್ತಿ ಉರಿದ ಮನೆ, ಕಿರಾಣಿ ಅಂಗಡಿ

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ವಿದ್ಯುತ್ ಅವಘಡಕ್ಕೆ ಮನೆಯ ಮೇಲ್ಛಾವಣಿ ಹಾಗೂ ಕಿರಾಣಿ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭುರಣಕಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಭುರಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ರಾಮಾಪೂರ ಗ್ರಾಮದ ಮನಸ್ಸೂರ ಭಯಭೇರಿ ಎಂಬುವರ ಮನೆಗೆ ಬೆಳಗಿನ ಜಾವ ಆಕಸ್ಮಿಕ ಬೆಂಕಿ ಬಿದ್ದಿದೆ.

 

Home add -Advt

 

ಮನೆಯ ಛಾವಣಿ, ಕಿರಾಣಿ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನಸ್ಸೂರ ಅವರು ಬ್ಯಾಟರಿ ರಿಪೇರಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಬ್ಯಾಟರಿಗಳು ಇದ್ದವು.

 

ಬ್ಯಾಟರಿ ರಿಪೇರಿ ಕೆಲಸದಲ್ಲಿ ಚಾರ್ಜ್ ಮಾಡುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

*ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಕಾಮುಕ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆಗೆ ಪತ್ರ ಬರೆದ ವಿದ್ಯಾರ್ಥಿನಿಯರು*

https://pragati.taskdun.com/mandya-govt-schoolteachersexual-harrasmentstudentscomplaint/

Related Articles

Back to top button