Kannada NewsKarnataka News

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಯಮಕನಮರಡಿ ವಿಧಾನಸಭಾ ಎಸ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿದರು.

Home add -Advt

ಸಮಾಜದಲ್ಲಿ ಮೌಡ್ಯದ ವಿರುದ್ಧ ಸದಾ ಜಾಗೃತಿ ಮೂಡಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮತ್ತೊಮ್ಮೆ ತಮ್ಮ ವೈಚಾರಿಕ ಚಿಂತನೆ ಸಾಬೀತು ಪಡಿಸಿದರು.

ನಾಮಪತ್ರವನ್ನು ಮೆರವಣಿಗೆ ನಡೆಸದೆ ಕೇವಲ ಐದು ಜನರೊಂದಿಗೆ ಹುಕ್ಕೇರಿ ತಹಶೀಲ್ದಾರ್‌ ಕಚೇರಿಗೆ ಬಂದು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಈ ಬಾರಿಯೂ ಯಾವುದೇ ಆಡಂಬರ ಇಲ್ಲದೆ ಐದು ಜನರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಳೆದ 15 ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ಈ ಬಾರಿಯೂ ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನಾಲ್ಕನೇ ಬಾರಿಗೆ ನಾಮಮಪತ್ರ ಸಲ್ಲಿಸಿದ್ದು, ಅಭಿವೃದ್ಧಿ ಮುಂದುವರೆಸಲು ಜನ ನನಗೆ ಮತ್ತೊಮ್ಮೆ ಅವಕಾಶ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಮಹಾಂತೇಶ ಮಗದುಮ್‌, ಅಬ್ದುಲ್‌ ಗಣಿ ದರ್ಗಾ, ಸಾಗರ ಪಿಂಗಟ್‌, ಕಿರಣ ರಜಪೂತ್, ಮಂಜುಗೌಡ ಪಾಟೀಲ್‌, ಸಿದ್ದು ಸುಣಗಾರ,  ಸೇರಿದಂತೆ ಯಮಕನಮರಡಿ ಮತಕ್ಷೇತ್ರದ ಹಲವು ಮುಖಂಡರು ಇದ್ದರು.

https://pragati.taskdun.com/congress-leaders-who-succeeded-in-persuading-ashoka-pujari/

Related Articles

Back to top button