Kannada NewsKarnataka NewsLatest
ಸಂಕಷ್ಟದಿಂದ ಪಾರು ಮಾಡು; ಲಕ್ಷ್ಮಿಯ ಪಾದಕ್ಕೆರಗಿದ ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಿಡಿ ಪ್ರಕರಣದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಇದೀಗ ತನ್ನನ್ನು ಸಂಕಷ್ಟದಿಂದ ಪಾರು ಮಾಡುವಂತೆ ತಾವು ನಂಬಿರುವ ಕೊಲ್ಲಾಪುರ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಬೇಡಿಕೊಂಡರು.
ಕೊಲ್ಲಾಪುರ ಮಹಾಲಕ್ಷ್ಮಿ ರಮೇಶ ಜಾರಕಿಹೊಳಿ ಅವರ ಇಷ್ಟ ದೇವತೆ. ಅವರ ಮನೆ ದೇವರು ಕೂಡ ಲಕ್ಷ್ಮಿ. ಪ್ರತಿಯೊಂದು ಪ್ರಮುಖ ಸಂದರ್ಭದಲ್ಲೂ ರಮೇಶ ಜಾರಕಿಹೊಳಿ ಕೊಲ್ಲಾಪುರ ಮಹಾಲಕ್ಷ್ಮಿಯ ದರ್ಶನ ಪಡೆಯುತ್ತಾರೆ.
ಸೋಮವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದ ರಮೇಶ ಜಾರಕಿಹೊಳಿ ಮಂಗಳವಾರ ಕೊಲ್ಲಾಪುರಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಈಗಿನ ಸಂಕಷ್ಟದಿಂದ ಪಾರು ಮಾಡುವಂತೆ ದೇವರಲ್ಲಿ ಬೇಡಿಕೊಂಡರು.
ಸಿಡಿ ಪ್ರಕರಣ: ಬೆಳಗಾವಿಯಲ್ಲಿ ಮೌನ ಮುರಿದ ಸಿಎಂ ಯಡಿಯೂರಪ್ಪ
ರಾಜಕೀಯದಲ್ಲಿ ಹಾರ, ಕಲ್ಲು, ಮೊಟ್ಟೆ ಎಲ್ಲ ಸಹಜ ಎಂದ ಡಿಕೆಶಿ




