Latest

ಸಿಡಿ ಲೇಡಿ ಕೋರ್ಟ್ ಗೆ ಹಾಜರಾಗುವ ಬಗ್ಗೆ ಸ್ಫೋಟಕ ಸುಳಿವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾಳೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಸಿಡಿ ಯುವತಿ ಬೆಂಗಳೂರಿನಲ್ಲಿಯೇ ಇದ್ದಾಳೆ. ಮಧ್ಯಾಹ್ನ 12:30ರಿಂದ 1 ಗಂಟೆಯೊಳಗೆ ಕೋರ್ಟ್ ಗೆ ಹಾಜರಾಗಬಹುದು ಎಂದರು.

Related Articles

ಕೋರ್ಟ್ ಏನು ಆದೇಶ ನೀಡುತ್ತೋ ಅದನ್ನು ನಾವು ಪಾಲಿಸುತ್ತೇವೆ. ತನಿಖಾಧಿಕಾರಿ ಬಂದಾಗ ಯುವತಿ ಹಾಜರು ಪಡಿಸುತ್ತೇವೆ. ಕೋರ್ಟ್ ಸೂಚಿಸಿದ ಕಡೆ ಯುವತಿ ಹಾಜರು ಪಡಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಈ ನಡುವೆ ಮಧ್ಯಾಹ್ನ 12 ಗಂಟೆಗೆ ತನಿಖಾಧಿಕಾರಿಗೆ ಕೋರ್ಟ್ ಗೆ ಹಾಜರಾಗುವಂತೆ 24ನೇ ಎಸಿಎಂಎಂ ಕೋರ್ಟ್ ಸೂಚನೆ ನಿಡಿದೆ. ಈ ಹಿನ್ನೆಲೆಯಲ್ಲಿ ಯುವತಿ ಮಧ್ಯಾಹ್ನದ ವೇಳೆಗೆ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಲಿದ್ದಾಳೆ ಎನ್ನಲಾಗಿದೆ.

ಸಂತ್ರಸ್ತ ಯುವತಿ ದೂರು ಎಸ್ಐಟಿಗೆ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button