ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಬೆಳಗಾವಿಯಲ್ಲಿ ಮೊನ್ನೆ ತಮ್ಮ ಮೇಲೆ ನಡೆದ ಕಲ್ಲುತೂರಾಟ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಇದೆಲ್ಲ ಸಹಜ. ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವ ಬದಲು ಚುನಾವಣೆಯತ್ತ ಗಮನ ಕೊಡೋಣ ಎಂದಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜಕೀಯದಲ್ಲಿ ಹೂವಿನ ಹಾರ ಹಾಕುವವರು, ಜೈಕಾರ ಹಾಕುವವರು, ಕಲ್ಲು ಹೊಡೆಯುವವರು, ಮೊಟ್ಟೆ ಎಸೆಯುವವರು, ಎಲ್ಲ ರೀತಿ ಜನರೂ ಇರುತ್ತಾರೆ. ಇದೆಲ್ಲೆವನ್ನು ರಾಜಕೀಯದಲ್ಲಿ ಪಾಸಿಟೀವ್ ಆಗಿ ತೆಗೆದುಕೊಳ್ಳಬೇಕು. ಅವರಿಗೆ ನಾವು ಪ್ರತಿಕ್ರಿಯೆ ಕೊಡಬೇಕಿಲ್ಲ. ಬಿಜೆಪಿ ಸಂಸ್ಕೃತಿಯನ್ನು ಜನ ನೋಡುತ್ತಿದ್ದಾರೆ. ಬಿಜೆಪಿ ವೈಫಲ್ಯ ನಮಗೆ ಗೆಲುವು ಸುಲಭವಾಗಲಿದೆ ಎಂದರು.
ಸಿಡಿ ಪ್ರಕರಣದ ಬಗ್ಗೆ ನಾನು ವಿಧಾನಸಭೆಯಲ್ಲಿ ಏನು ಹೇಳಬೇಕು ಅದನ್ನು ಹೇಳಿಯಾಗಿದೆ. ಸಧ್ಯಕ್ಕೆ ಆ ಬಗ್ಗೆ ನಾನು ಮಾತನಾಡಲ್ಲ. ಚುನಾವಣೆ ಮುಗಿಯಲಿ ಮೊದಲು ಚುನಾವಣೆಯನ್ನು ಶಾಂತಿಯುತವಾಗಿ ಮಾಡೋಣ ಎಂದು ಹೇಳಿದರು. ಸಿಡಿ ಯುವತಿ ಪೋಷಕರು ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅವರ ಅನುಕೂಲಕ್ಕಾಗಿ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೇಳಲಿ ಬಿಡಿ ಅದಕ್ಕೆಲ್ಲ ಪ್ರತಿಕ್ರಿಯಿಸುತ್ತಾ ತಲೆಕೆಡಿಸಿಕೊಳ್ಳಲಾಗದು ಎಂದು ತಿಳಿಸಿದರು.
ಯಡಿಯೂರಪ್ಪ ಬೆಳಗಾವಿ ಕಾರ್ಯಕ್ರಮದಲ್ಲಿ ಬದಲಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ